ಮಡಿಕೇರಿ, ಮಾ. 15: ನಗರದ ಮೈಸೂರು ರಸ್ತೆಯ ನಿವಾಸಿ ಹಾಗೂ ನಿವೃತ್ತ ಸೈನ್ಯಾಧಿಕಾರಿ ಲೆ.ಕ. ಕೆ.ಜಿ. ಉತ್ತಯ್ಯ ಅವರಿಗೆ ಸೇರಿದ ಎರಡು ಕೋವಿಗಳನ್ನು ಕಳವು ಮಾಡಿರುವ ಕೃತ್ಯ ಸಂಭವಿಸಿದೆ. ಹಗಲು ವೇಳೆ 12 ಗಂಟೆ ಸುಮಾರಿಗೆ ಮನೆಯಿಂದ ಹೊರ ತೆರಳಿದ್ದ ಅವರು, ಕೇವಲ 20 ನಿಮಿಷಗಳ ಅಂತರದಲ್ಲಿ ವಾಪಾಸಾಗುವಷ್ಟರಲ್ಲಿ ಈ ಕೃತ್ಯ ನಡೆದಿರುವದಾಗಿ ತಿಳಿದು ಬಂದಿದೆ.

ನಿವೃತ್ತ ಸೈನ್ಯಾಧಿಕಾರಿ ನೀಡಿರುವ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಒಂದು ಕೋವಿ ಪ್ರೆಂಚ್ ನಿರ್ಮಿತ ಹಾಗೂ ಮತ್ತೊಂದು ಇಂಗ್ಲೆಂಡ್ ನಿರ್ಮಿತದೊಂದಿಗೆ ಎರಡೂ ಬಂದೂಕುಗಳು ಒಂಟಿ ನಳಿಕೆಯದ್ದಾಗಿದೆ ಎಂದು ದೂರಿನಿಂದ ಗೊತ್ತಾಗಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ವ್ಯಾಪಕ ಶೋಧದೊಂದಿಗೆ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.