ಕೂಡಿಗೆ, 15 : ಅನುಮತಿ ಪಡೆಯದೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ ವ್ಯಕ್ತಿಯ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಬಸವನತ್ತೂರು ಗ್ರಾಮದ ಸಂತೋಷ್ ಎಂಬವರು ಕಂದಾಯ ಇಲಾಖೆ ಹಾಗೂ ಗ್ರಾಪಂ ನಿಂದ ನಿರಾಕ್ಷೇಪಣ ಪತ್ರ ಪಡೆದುಕೊಳ್ಳದೆ ತನ್ನ ಜಮೀನಿನಲ್ಲಿ ಕೊಳವೆ ಬಾವಿ ತೆಗೆಸಿದ್ದಾರೆ. ಅಲ್ಲದೆ ಪಕ್ಕದ ಸ್ವಾಮಿ ಎಂಬವರ ಜಮೀನಿನಲ್ಲಿರುವ ಕೊಳವೆ ಬಾವಿ ಸಮೀಪದಲ್ಲಿಯೇ ಮತ್ತೊಂದು ಕೊಳವೆ ಬಾವಿ ತೆಗೆದಿರುವದನ್ನು ಆಕ್ಷೇಪಿಸಿ ಸ್ವಾಮಿ ಎಂಬವರ ದೂರಿನನ್ವಯ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಲೆಕ್ಕಿಗ ಸಚಿನ್ ಎಂಬವರ ಬಳಿ ಉದ್ದಟತನದಿಂದ ಸಂತೋಷ್ ವರ್ತಿಸಿದರು ಎನ್ನಲಾಗಿದೆ. ಗ್ರಾಮ ಲೆಕ್ಕಿಗ ಸಚಿನ್ ಮತ್ತು ಕೂಡುಮಂಗಳೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯೇಷ ಎಂಬವರ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿದೆ.