ಗೋಣಿಕೊಪ್ಪಲು, ಮಾ. 16: ಕಾವೇರಿ ಪಾಲಿಟೆಕ್ನಿಕ್ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ರಕ್ತದಾನ ಮತ್ತು ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ಚಂದ್ರಶೇಖರ್ ಮಾತನಾಡಿ, ಹೆಚ್.ಐ.ವಿ. ಏಡ್ಸ್‍ನ ಗುಣಲಕ್ಷಣಗಳು, ಏಡ್ಸ್ ತಡೆಗಟ್ಟುವ ವಿಧಾನಗಳು ಹಾಗೂ ವಿದ್ಯಾರ್ಥಿ ಗಳಿಂದ ಏಡ್ಸ್ ಮುಕ್ತ ಭಾರತದ ನಿರ್ಮಾಣದ ಪ್ರತಿಜ್ಞೆಯನ್ನು ಮಾಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ಶ್ರೀನಿವಾಸ ವಹಿಸಿ, ಪ್ರಸಾದ್ ರಾವ್ ವಿವರ ವಾಚಿಸಿದ ಕಾರ್ಯಕ್ರಮದಲ್ಲಿ ಸದಸ್ಯರಾದ ಮುರಳಿ ಸ್ವಾಗತಿಸಿ, ಮಹೇಶ್ ವಂದಿಸಿದರು.