ಸುಂಟಿಕೊಪ್ಪ, ಮಾ. 16: ಲೋಕಸಭಾ ಚುನಾವಣೆ ಹಿನ್ನೆಲೆ ಮತ ಯಂತ್ರದ ಮೂಲಕ ಮತ ಚಲಾಯಿಸುವ ಪ್ರಾತ್ಯಕ್ಷತೆಯನ್ನು ಸಾರ್ವಜನಿಕರಿಗೆ ತೋರಿಸಲಾಯಿತು.
ಸುಂಟಿಕೊಪ್ಪ ಬಸ್ ತಂಗುದಾಣ ಹಾಗೂ ಮಾರುಕಟ್ಟೆ ರಸ್ತೆ ಸೇರಿದಂತೆ ವಿವಿಧ ವಾರ್ಡ್ಗಳಿಗೆ ತೆರಳಿ ಯಂತ್ರದಲ್ಲಿ ಇರುವ ಗೊಂದಲಗಳನ್ನು ನಿವಾರಿಸುವ ದಿಸೆಯಲ್ಲಿ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭ ಮತ ಯಂತ್ರದ ಅಧಿಕಾರಿಗಳು ಪಂಚಾಯಿತಿ ಪಿಡಿಓ ಮೇದಪ್ಪ, ಸಿಬ್ಬಂದಿ ಡಿ.ಎಂ. ಮಂಜುನಾಥ್ ಮತ್ತಿತರರು ಇದ್ದರು.