ಚೆಟ್ಟಳ್ಳಿ, ಮಾ. 15: ಸರ್ಕಾರಿ ಶಾಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್ ವತಿಯಿಂದ ಹಚ್ಚಿನಾಡು ಸ.ಹಿ.ಪ್ರಾ. ಶಾಲೆ ಸಭಾಂಗಣದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು

ಅಮ್ಮತ್ತಿ ಒಂಟಿಯಂಗಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ಲಿಲ್ಲಿ ಹಾಗೂ ಕೊಂಡಂಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಕನ್ನು ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಇದರೊಂದಿಗೆ ಜಿಲ್ಲಾ ಪ್ರಶಸ್ತಿ ವಿಜೇತರಾದ ಪುದುಕೋಟೆಯ ಸಿ.ಎ. ಪಾರ್ವತಿ ಹಾಗೂ ಎಲಿಯಂಗಾಡು ನಟರಾಜ್ ಮತ್ತು ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್‍ನ ಸಿಆರ್‍ಪಿ ಸುಷ್ಮ ಅವರನ್ನ ಸನ್ಮಾನಿಸಲಾಯಿತು.

ಈ ಸಂದರ್ಭ ಶಿಕ್ಷಕರುಗಳಾದ ಸುಬ್ರಹ್ಮಣ್ಯ, ರವಿಕುಮಾರ್, ಪ್ರೀತಿ ಬೆನೆಡಿಕ್ಟ್ ಕುಟೀನ ಮತ್ತಿತರರು ಉಪಸ್ಥಿತರಿದ್ದರು.