ಮಡಿಕೇರಿ, ಮಾ. 16 ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ವೀರಾಜಪೇಟೆ ಕಾವೇರಿ ಕಾವೇರಿ ಕಾಲೇಜಿನ ತಲಾ ಐವರು ವಿದ್ಯಾರ್ಥಿಗಳು ಬಹುಮಾನ ವಿಜೇತರಾಗಿದ್ದಾರೆ.
ಯುವ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಪ್ರಕೃತಿ ವಿಕೋಪ ಸಂಭವಿಸಿದ ನಡೆದ ವಿದ್ಯಮಾನ ಗಳನ್ನಿಟ್ಟುಕೊಂಡು ಬರೆದಿರುವ ತಮ್ಮ ಚೊಚ್ಚಲ ಕೃತಿ ಪ್ರಕೃತಿ ಮುನಿದ ಹಾದಿಯಲ್ಲಿ... ಲೋಕಾರ್ಪಣೆ ಪ್ರಯುಕ್ತ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಕೊಡಗಿನ ಪರಿಸರ ಮತ್ತು ಅಭಿವೃದ್ಧಿ ವಿಷಯ ಕುರಿತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಎಫ್ಎಂ ಕೆಎಂಸಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗ ದಲ್ಲಿ ಶುಕ್ರವಾರ ಸ್ಪರ್ಧೆ ನಡೆಯಿತು.
ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕಾವೇರಿ ಕಾಲೇಜಿನ ಎಚ್.ಜಿ. ರಿತೇಶ್ ಪ್ರಥಮ, ಎಫ್ಎಂಕೆಎಂಸಿ ಕಾಲೇಜಿನ ಕೆ.ಎಲ್. ಲೀನಾ, ಕಾವೇರಿ ಕಾಲೇಜಿನ ಎನ್. ನಿರ್ಮಿತಾ ತೃತೀಯ ಬಹುಮಾನ ಪಡೆದಿದ್ದಾರೆ.
ದ್ವಿತೀಯ ವರ್ಷದ ವಿದ್ಯಾರ್ಥಿ ಗಳಿಗೆ ನಡೆದ ಸ್ಪರ್ಧೆಯಲ್ಲಿ ಎಫ್ಎಂಕೆಎಂಸಿ ಕಾಲೇಜಿನ ಎ.ಎನ್. ವೇದಶ್ರೀ ಪ್ರಥಮ, ಕಾವೇರಿ ಕಾಲೇಜಿನ ಎ.ಎನ್. ದೀಕ್ಷಿತಾ ದ್ವಿತೀಯ, ಎಫ್ಎಂಕೆಎಂಸಿ ಕಾಲೇಜಿನ ಕೆ.ಪಿ. ಯಶಸ್ವಿನಿ, ರಮೇಶ್ ನಾಯಕ್ ತೃತೀಯ ಬಹುಮಾನ ಪಡೆದಿದ್ದಾರೆ.
ಅಂತಿಮ ವರ್ಷದ ವಿದ್ಯಾರ್ಥಿ ಗಳಿಗೆ ನಡೆದ ಸ್ಪರ್ಧೆಯಲ್ಲಿ ಎಫ್ಎಂ ಕೆಎಂಸಿ ಕಾಲೇಜಿನ ಎಂ.ಆರ್. ಅಮೃತ ಪ್ರಥಮ, ಕಾವೇರಿ ಕಾಲೇಜಿನ ಜೆನಿಟಾ ಮೋರಸ್ ದ್ವಿತೀಯ, ಕೆ.ಎನ್. ರಾಜೇಶ್ವರಿ ತೃತೀಯ ಬಹುಮಾನ ಪಡೆದಿದ್ದಾರೆ.
ತಾ. 26 ರಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆಯುವ ಪ್ರಕೃತಿ ಮುನಿದ ಹಾದಿಯಲ್ಲಿ... ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.