ಮಡಿಕೇರಿ, ಮಾ. 15: ಕೊಡಗು ಜಿಲ್ಲೆಯ ಬೆಟ್ಟಸಾಲುಗಳ ಸಹಿತ ಪ್ರವಾಸಿ ತಾಣಗಳಿಗೆ ಸುಡುಬಿಸಿಲಿನ ನಡುವೆ, ಬೆಂಕಿಯ ಅಪಾಯದಿಂದ ಪ್ರವಾಸ ನಿರ್ಬಂಧಿಸುವಂತಾಗಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ. ಮೊನ್ನೆ ತಡಿಯಂಡಮೋಳ್ ವ್ಯಾಪ್ತಿ ಯಲ್ಲಿ ಬೆಂಕಿ ಕಾಣಿಸಿ ಕೊಂಡಿರುವ ಬಗ್ಗೆ ಉಲ್ಲೇಖಿಸಿರುವ ಅವರು ಆ ಕಾರಣಕ್ಕಾಗಿಯೇ ಹೊರಗಿನಿಂದ ಬರುವವರಿಗೆ ಪ್ರವೇಶ ಕಲ್ಪಿಸುತ್ತಿಲ್ಲ ವೆಂದು ‘ಶಕ್ತಿ’ಗೆ ತಿಳಿಸಿದರು.

ತಡಿಯಂಡಮೋಳ್ ಶಿಖರ ದಂಚಿನಲ್ಲಿ ಬೆಂಕಿ ಕಾಣಿಸಿಕೊಂಡರೂ, ರಸ್ತೆ ಮಾರ್ಗದ ಕೊರತೆಯಿಂದ ಅಗ್ನಿ ಶಾಮಕ ವಾಹನ ತೆರಳಲು ಸಾಧ್ಯ ವಾಗದೆ, ಸ್ವತಃ ಅರಣ್ಯ ಸಿಬ್ಬಂದಿಯು ಸ್ಥಳೀಯ ಅಲ್ಲಿನ ಜನತೆಯ ಸಹಕಾರದಿಂದ ಬೆಂಕಿ ನಂದಿಸಿರುವ ದಾಗಿ ಪ್ರತಿಕ್ರಿಯಿಸಿದರು. ಹೀಗಾಗಿ ಮಳೆಗಾಲ ಅಡಿಯಿಡುವ ತನಕ ಕಾಡ್ಗಿಚ್ಚುವಿನ ಅಪಾಯ ಯಾವ ರೀತಿ ಎದುರಾಗಲಿದೆ ಎಂದು ನಿರೀಕ್ಷಿಸಲು ಕಷ್ಟವೆಂದು ನೆನಪಿಸಿದರು.

ಪ್ರಸಕ್ತ ಬರುವ ಪ್ರವಾಸಿಗರಿಗೆ ಇಂತಹ ನಿಸರ್ಗದಿಂದ ಕೂಡಿರುವ ಬೆಟ್ಟ ಪ್ರದೇಶಗಳಿಗೆ ಅನುಮತಿ ನಿರಾಕರಿಸಲಾಗಿದೆ. ಜಿಲ್ಲೆಯ ಜನತೆ ಕೂಡ ಅರಣ್ಯ ಇಲಾಖೆಯೊಂದಿಗೆ ಸಹಕರಿಸಿ, ಕಾಡ್ಗಿಚ್ಚು ತಡೆಗಟ್ಟಲು ಕೈ ಜೋಡಿಸಬೇಕೆಂದು ಅಭಿಪ್ರಾಯ ಪಟ್ಟರು. ಸದ್ಯ ಯಾವದೇ ಚಾರಣ ಗಳಿಗೆ ಇಲಾಖೆ ಯಾರಿಗೂ ಅನುಮತಿ ಕಲ್ಪಿಸದಿರಲು ನಿರ್ಧರಿಸಿರುವದಾಗಿ ಮಂಜುನಾಥ್ ಸ್ಪಷ್ಟಪಡಿಸಿದರು.