ನಾಪೆÉÇೀಕ್ಲು, ಮಾ. 15: ಸ್ಥಳೀಯ ವಾಹನ ಚಾಲಕ ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆಯನ್ನು ತಾ. 31 ರಂದು ಸಂಘದ ಕಚೇರಿ ಯಲ್ಲಿ ನಡೆಸುವಂತೆ ತೀರ್ಮಾನಿಸ ಲಾಯಿತು. ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಂಡು ಅಂದು ನೂತನ ಸಾಲಿಗೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಚುನಾವಣೆಯನ್ನು ನಡೆಸಲಾಗುವದು. ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ವರ್ಧಿಸುವವರು ಸಂಘದ ಸದಸ್ಯರಾಗಿ ಮೂರು ವರ್ಷಗಳ ಕಾಲ ಸಕ್ರಿಯರಾಗಿರಬೇಕು. ನೂತನವಾಗಿ ಸದಸ್ಯರಾಗುವವರು ಕೂಡಲೇ ಸಂಘದ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಸೂಚಿಸ ಲಾಯಿತು. ನಗರದಲ್ಲಿ ಆಟೋ ರಿಕ್ಷಾ ನಿಲುಗಡೆಗೆ ಬ್ಯಾರಿಕೆಡ್ ವ್ಯೆವಸ್ಥೆಯನ್ನು ಕಲ್ಪಿಸುವ ಸಲುವಾಗಿ ಮಹಾಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವಂತೆಯು ಮತ್ತು ಆಟೋ ರಿಕ್ಷಾಗಳ ಬಾಡಿಗೆ ದರದ ಚಾರ್ಟನ್ನು ತಯಾರಿಸಿ ಪ್ರತಿ ಆಟೋ ರಿಕ್ಷಾಗಳಲ್ಲಿ ಆಳವಡಿಸಲು ತೀರ್ಮಾನಿಸಲಾಯಿತು. ಆಟೋ ರಿಕ್ಷಾ ನಿಲ್ದಾಣ ಬಿಟ್ಟು ನಗರದಲ್ಲಿ ಆಟೋಗಳು ಸುತ್ತುತ್ತಿರುವ ಬಗ್ಗೆ ಸದಸ್ಯರು ಪ್ರಶ್ನಿಸಲಾಗಿ ಮುಂದಿನ ಮಹಾಸಭೆಯಲ್ಲಿ ಇದಕ್ಕೆ ಕಠಿಣ ಕ್ರಮಕೈಗೊಳ್ಳುವಂತೆ ನಿರ್ಣಯವನ್ನು ಕೈಗೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ರೇಣುಕೇಶ್ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಧ್ಯಕ್ಷ ಎಂ.ಇ. ರಜಾಕ್ ಕಾರ್ಯದರ್ಶಿ ಕೆ.ಕೆ. ಲೋಕೇಶ್, ಸಲಹ ಸಮಿತಿಯ ಸದಸ್ಯರಾದ ಕೆ.ಎಂ. ರಮೇಶ್, ಮತ್ತಿತರರು ಇದ್ದರು.