ಗೋಣಿಕೊಪ್ಪಲು, ಮಾ. 15: ಮೈಸೂರಿನ ವಿದ್ಯಾಶ್ರಮ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಟೆಕ್ನಿಕಲ್ ಫೆಸ್ಟ್‍ನಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಬಿಸಿಎ ವಿಭಾದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರೊಡೆಕ್ಟ್ ಲಾಂಚ್ ಸ್ಪರ್ಧೆಯಲ್ಲಿ ಬಿಸಿಎ ವಿದ್ಯಾರ್ಥಿನಿಯರಾದ ಕೆ.ಎಸ್. ಹರ್ಷಿತ ಹಾಗೂ ಎ.ವಿ. ನಮಿತಾಶ್ರೀ ಪ್ರಥಮ, ಕೋಡಿಂಗ್ ವಿಭಾಗದಲ್ಲಿ ಪಿ.ವಿ ವಿಭೀಶ್ ಹಾಗೂ ಬಿ.ಎಸ್. ಗ್ರೀಷÀ್ಮ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಬಿಸಿಎ ವಿಭಾಗ ಮುಖ್ಯಸ್ಥ ಯು.ಟಿ. ಪೆಮ್ಯಯ್ಯ ಹಾಗೂ ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತ ಅವರುಗಳ ಮಾರ್ಗ ದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.