ಕೂಡಿಗೆ, ಮಾ. 16: ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಂತರ್ಜಲ ಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕುಶಾಲನಗರ ಹೋಬಳಿಯ ಹೆಬ್ಬಾಲೆ, ಕೂಡಿಗೆ, ತೊರೆನೂರು, ಸಿದ್ಧಲಿಂಗಪುರ ವ್ಯಾಪ್ತಿ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯುಂಟಾಗಿದೆ. ಈ ವ್ಯಾಪ್ತಿಯ ಕೆಲವು ಕೊಳವೆ ಬಾವಿಗಳಲ್ಲಿ ನೀರಿನ ಸಾಮಥ್ರ್ಯವು ಕಡಿಮೆಯಾಗಿ ಪೈಪ್‍ಗಳಲ್ಲಿ ನೀರಿನ ಸರಬರಾಜು ಆಗದಂತಾಗಿದೆ. ಇನ್ನೊಂದೆಡೆ ಅಂತರ್ಜಲವು ದಿನದಿಂದ ದಿನಕ್ಕೆ ಕಡಿಮೆ ಯಾಗುತ್ತಿರುವದರಿಂದ ಕೊಳವೆ ಬಾವಿಗಳು ಚಾಲನೆ ಯಲ್ಲಿದ್ದರೂ, ನೀರು ಮಾತ್ರ ಬರುತ್ತಿಲ್ಲ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆಯು ಒಂದೊಂದು ವಾರ್ಡುಗಳಲ್ಲಿ ಹೆಚ್ಚಾಗುತ್ತಿದೆ. ನೀರಿನ ಸಮಸ್ಯೆಗೆ ಸ್ಥಳೀಯ ಗ್ರಾಮ ಪಂಚಾಯಿತಿ (ಮೊದಲ ಪುಟದಿಂದ) ವತಿಯಿಂದ ಬದಲಿ ಕೊಳವೆ ಬಾವಿಗಳನ್ನು ಕೊರೆಸುವ ಜೊತೆಗೆ ಟ್ಯಾಂಕರ್‍ಗಳಲ್ಲಿ ಕೆಲವು ವಾರ್ಡ್‍ಗಳಿಗೆ ಕುಡಿಯುವ ನೀರಿನ್ನು ಸರಬರಾಜು ಮಾಡುವದರಲ್ಲಿ ಕಾರ್ಯೋನ್ಮುಖವಾಗಿವೆ.ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಕೆರೆ ಕಟ್ಟೆಗಳು, ಕೊಳವೆ ಬಾವಿಗಳು, ಗ್ರಾಮಗಳು ನೀರಿನಿಂದಾವೃತವಾಗಿದ್ದರೂ ಇದೀಗ ಬಿಸಿಲಿನ ಧಗೆಗೆ ಅಂತರ್ಜಲ ಮಟ್ಟ ಕಡಿಮೆಯಾಗಿದೆ. ತೆರೆದ ಬಾವಿಗಳಲ್ಲಿಯೂ ಸಹ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. -ಕೆ.ಕೆ.ನಾಗರಾಜಶೆಟ್ಟಿ