ಮಡಿಕೇರಿ, ಮಾ. 14: ಪೊನ್ನಂಪೇಟೆಯ ಗೋಲ್ಡನ್ ಜೆ.ಸಿ.ಐ. ವತಿಯಿಂದ ಅಲ್ಲಿನ ಅರಣ್ಯ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಮೈಸೂರಿನ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 100 ಮಂದಿ ರಕ್ತದಾನ ಮಾಡಿದರು.
ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ. ಸಿ.ಜಿ. ಕುಶಾಲಪ್ಪ ಹಾಗೂ ಸಿಬ್ಬಂದಿಗಳು, ಜೀವಧಾರ ರಕ್ತನಿಧಿ ಕೇಂದ್ರದ ಸುಬ್ರಮಣಿ, ಈಶ್ವರ, ಹೊನ್ನೇಗೌಡ, ಅಶ್ವಿನ ಪಾಲ್ಗೊಂಡಿದ್ದರು. ಜೆ.ಸಿ.ಐ. ಅಧ್ಯಕ್ಷೆ ಕಾವ್ಯ ಸೋಮಯ್ಯ, ಹಾಗೂ ಸದಸ್ಯರು, ಸುಜು ರಾಬಿನ್, ದಿಲನ್, ಪುನೀತ, ಯಮುನ, ನೇತ್ರ ಮತ್ತಿತರರು ಉಸ್ತುವಾರಿ ವಹಿಸಿದ್ದರು.