ಮಡಿಕೇರಿ, ಮಾ. 14: ನಗರಸಭೆಯ ಆಡಳಿತ ಮಂಡಳಿಯ ಅಧಿಕಾರ ತಾ. 14ಕ್ಕೆ ಮುಕ್ತಾಯವಾಗಿದ್ದು, ಆಡಳಿತಾಧಿಕಾರಿಯಾಗಿ ಮುಂದಿನಆಡಳಿತ ರಚನೆವರೆಗೆ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.ತಾ. 15 ರಂದು (ಇಂದು) ಜಿಲ್ಲಾಧಿಕಾರಿಅನೀಸ್ ಕಣ್ಮಣಿ ಜಾಯ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಲೋಕಸಭಾ ಚುನಾವಣಾ ಘೋಷಣೆ ಆಗಿರುವದರಿಂದ ಹಾಗೂ ಚುನಾವಣೆ ನಂತರ ಮಳೆಗಾಲ ಆರಂಭವಾಗಲಿರುವದರಿಂದ ಅಕ್ಟೋಬರ್ ತಿಂಗಳಲ್ಲಿ ನಗರಸಭಾ ಚುನಾವಣೆ ನಡೆಯಬಹುದೆಂದು ಅಂದಾಜಿಸಲಾಗಿದೆ.