ಮಡಿಕೇರಿ, ಮಾ. 14: ದೇಶದಲ್ಲಿ ಎಲ್ಲರೂ ಕಾನೂನಿಗೆ ತಲೆಬಾಗ ಲೇಬೇಕಿದ್ದು; ಕಾನೂನಿಗಿಂತ ಯಾರೂ ದೊಡ್ಡವರಲ್ಲವೆಂದು ಜಿಲ್ಲಾ ಮಡಿಕೇರಿ, ಮಾ. 14: ದೇಶದಲ್ಲಿ ಎಲ್ಲರೂ ಕಾನೂನಿಗೆ ತಲೆಬಾಗ ಲೇಬೇಕಿದ್ದು; ಕಾನೂನಿಗಿಂತ ಯಾರೂ ದೊಡ್ಡವರಲ್ಲವೆಂದು ಜಿಲ್ಲಾ ಧರ್ಮವೆಂದು ಸಮರ್ಥಿಸಿದ ಅವರು ಇನ್ನೊಬ್ಬರು ತಪ್ಪು ಎಸಗುವರೆಂದು ನಾವು ಕಾನೂನು ಉಲ್ಲಂಘಿಸುವದು ಸಮಂಜಸವಲ್ಲವೆಂದು ಅಭಿಪ್ರಾಯ ಪಟ್ಟರು. ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಮಾಧ್ಯಮ ಕ್ಷೇತ್ರ ಮತ್ತು ಕಾನೂನು ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮಾಧ್ಯಮ ಕ್ಷೇತ್ರದವರು ಕೂಡ ಕಾನೂನಿನ ಅರಿವಿನೊಂದಿಗೆ, ಕಾಲಕಾಲಕ್ಕೆ ತಿದ್ದುಪಡಿಯಾಗುವ ಬದಲಾವಣೆಗಳು ಹಾಗೂ ಸರ್ವೋಚ್ಚ ನ್ಯಾಯಾಲಯಗಳಿಂದ ಹೊರ ಬೀಳಲಿರುವ ತೀರ್ಪುಗಳನ್ನು ಆಧರಿಸಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.ತೆರಿಗೆ ವಂಚಕರ ಬಗ್ಗೆ ಬೊಟ್ಟುಮಾಡಿದ ಅವರು, ಇಂತವರ ಕಾರಣಕ್ಕಾಗಿ ಕಾನೂನು ಪಾಲಕರೇ ವಂಚಿಸಿದರೆ ಹೇಗೆಂದು ಪ್ರಶ್ನಿಸುತ್ತಾ, ನೊಂದವರಿಗೆ ನ್ಯಾಯಕೊಡಿಸಲು ಹಾಗೂ ಸಂತ್ರಸ್ತರ ಭವಿಷ್ಯಕ್ಕಾಗಿಯೇ ‘ಫೋಕ್ಸೋ’ದಂತಹ ಅಪರಾಧ ತಡೆ ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ನೆನಪಿಸಿದರು. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವವರ ಹೇಳಿಕೆಗಳನ್ನು ನಾಲ್ಕು ಗೋಡೆ ನಡುವೆ ವೀಡಿಯೋ ಸಹಿತ ಪಡೆಯಲಾಗುತ್ತಿದ್ದು, ಅಂತವರ ಆತ್ಮಗೌರವಕ್ಕೆ ಧಕ್ಕೆಯಾಗುವಂತೆ ಮಾಧ್ಯಮಗಳು ಸುದ್ದಿ ಬಿತ್ತರಿಸ ಬಾರದೆಂದು ಸ್ಪಷ್ಟಪಡಿಸಿದರು.
ಸುದ್ದಿಗಳನ್ನು ಪ್ರಕಟಿಸುವಾಗ ಮಾನವೀಯ ಅಂಶಗಳು, ಸಮಯ- ಸನ್ನಿವೇಶಗಳನ್ನು ಗಮನದಲ್ಲಿ ಇರಿಸಿಕೊಳ್ಳುವದು ವಿವೇಕಪೂರ್ಣ ನಡೆಯೆಂದು ತಿಳಿಹೇಳಿದ ನ್ಯಾಯಾ ಧೀಶರು, ನಾವು ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸುವಾಗ ಇತರರಿಗೂ ಪ್ರೇರಣೆಯಾಗಲಿದೆ ಎಂದರು.
(ಮೊದಲ ಪುಟದಿಂದ) ಬದಲಾಗಿ ಇನ್ನಾರೋ ಅಪರಾಧಗಳನ್ನು ಎಸಗುವವರು ಉದಾಹರಣೆಯಾಗಿ ನಮ್ಮ ಆತ್ಮಸಾಕ್ಷಿಯನ್ನು ಬಲಿಗೊಡದಂತೆ ನಡೆದುಕೊಳ್ಳುವಂತೆ ಅವರು ಕರೆ ನೀಡಿದರು.
ಒಗ್ಗೂಡಿ ಕಾರ್ಯನಿರ್ವಹಿಸೋಣ
ಸಮಾಜಕ್ಕೆ ಒಳ್ಳೆಯದನ್ನು ಮಾಡುವ ದಿಸೆಯಲ್ಲಿ ಮತ್ತು ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ, ಕಾನೂನು ಪಾಲಿಸಲು ನ್ಯಾಯಾಂಗ, ಪೊಲೀಸ್ ಇಲಾಖೆ ಹಾಗೂ ಪತ್ರಿಕಾರಂಗ ಒಗ್ಗೂಡಿ ಕಾರ್ಯನಿರ್ವಹಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅಭಿಮತ ವ್ಯಕ್ತಪಡಿಸುತ್ತಾ, ಉತ್ತಮ ಸಮಾಜ ನಿರ್ಮಿಸೋಣ ಎಂದು ಕರೆ ನೀಡಿದರು. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶೇಷವಾಗಿ ಅಪ್ರಾಪ್ತರಿಂದಾದ ಅಪರಾಧಗಳು ದೌರ್ಜನ್ಯ, ಅತ್ಯಾಚಾರ, ಶೋಷಣೆಯಂತಹ ಪ್ರಕರಣಗಳಲ್ಲಿ 18 ವರ್ಷದೊಳಗಿನವರ ಬಗ್ಗೆ ಲಿಂಗತಾರತಮ್ಯವಿಲ್ಲದೆ ಸುದ್ದಿಗಳನ್ನು ಬಿತ್ತರಿಸುವಾಗ ಮಾಧ್ಯಮಗಳು ಕಾನೂನು ತಜ್ಞರ ಸಲಹೆಯಂತೆ ಮುನ್ನಡೆಯುವಂತೆ ತಿಳಿಹೇಳಿದರು. ದೇಶದ ಕಾನೂನು ಉಲ್ಲಂಘಿಸದಂತೆ ನ್ಯಾಯಾಂಗವೂ ಸೂಕ್ಷ್ಮವಾಗಿ ಹೆಜ್ಜೆ ಇರಿಸುತ್ತಿದ್ದು, ಪತ್ರಿಕಾರಂಗ ಮತ್ತು ಪೊಲೀಸ್ ಇಲಾಖೆಯ ಹೊಣೆಗಾರಿಕೆಯೂ ಹೆಚ್ಚಾಗಿದೆ ಎಂದು ಅವರು ನೆನಪಿಸಿದರು.
ಸಮಾಜದಲ್ಲಿ ತೀರಾ ಪರಿಣಾಮಕಾರಿಯಾಗಿರುವ ಮಾಧ್ಯಮ ಕ್ಷೇತ್ರದಿಂದ ಯಾವದೇ ದುಷ್ಪರಿಣಾಮಗಳು ಬೀರದಂತೆ ಸದಾ ಎಚ್ಚರವಹಿಸುವ ಅನಿವಾರ್ಯತೆಯಿದ್ದು, ‘ಫೋಕ್ಸೋ’ ಕಾಯ್ದೆಯಡಿ ಸಿಲುಕುವ ಅಪರಾಧಗಳ ಸಂಬಂಧ ಸಂತ್ರಸ್ತರ ಹೆಸರುಗಳನ್ನು ಎಲ್ಲಿಯೂ ಬಹಿರಂಗಪಡಿಸದೆ, ಅಂತವರಿಗೆ ನ್ಯಾಯದೊಂದಿಗೆ ಹೊಸ ಬದುಕು ಕಲ್ಪಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವೆಂದು ನೂರುನ್ನೀಸಾ ಸ್ಪಷ್ಟಪಡಿಸಿದರು.
ಆರ್ಥಿಕ ನೆರವು
ದೌರ್ಜನ್ಯಕ್ಕೆ ಸಿಲುಕುವ ಕುಟುಂಬದ ನೆರವಿಗೆ ಪ್ರಾಧಿಕಾರ ಸದಾ ಕಾಳಜಿ ವಹಿಸುತ್ತಾ, ಗರಿಷ್ಠ ರೂ. 10 ಲಕ್ಷ ತನಕ ಆರ್ಥಿಕ ನೆರವು ಕಲ್ಪಿಸಲಿದ್ದು, ವಿಚಾರಣೆಯ ಪ್ರಥಮ ಹಂತದಲ್ಲೇ ಇಂತಹ ಪ್ರಕರಣಗಳ ಸಂತ್ರಸ್ತರ ಕುಟುಂಬಕ್ಕೆ ಶೇ. 25ರಷ್ಟು ಸಹಾಯಹಸ್ತ ಕಲ್ಪಿಸುವದಾಗಿ ಅವರು ನುಡಿದರು.
ವಾಸ್ತವ ತಿಳಿಸಲು ಎಸ್ಪಿ ಕರೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅಭಿಪ್ರಾಯ ಮಂಡಿಸುತ್ತಾ, ವಿಶೇಷವಾಗಿ ದೃಶ್ಯ ಮಾಧ್ಯಮಗಳು ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಯಾವದೇ ಸುದ್ದಿಯ ನೈಜತೆಯನ್ನು ಪ್ರಕಟಿಸುವ ಮೂಲಕ ವಾಸ್ತವವನ್ನು ಸಮಾಜಕ್ಕೆ ತಿಳಿಸುವಂತೆ ಕರೆ ನೀಡಿದರು.
ನಿರ್ಲಕ್ಷ್ಯ ಸಲ್ಲದು
ಕಾನೂನು ಜಾರಿಯಲ್ಲಿ ಪೊಲೀಸ್ ಇಲಾಖೆಯ ಯಾರೊಬ್ಬರೂ ನಿರ್ಲಕ್ಷ್ಯ ತಳೆಯಬಾರದು ಎಂದು ಬೊಟ್ಟುಮಾಡಿದ ಅವರು, ಯಾರೋ ದೌರ್ಜನ್ಯಕ್ಕೆ ಸಿಲುಕಿ ದೂರು ಸಲ್ಲಿಸಿದರೂ, ಅಗತ್ಯ ಬಿದ್ದರೆ ತಜ್ಞರ ಅಭಿಪ್ರಾಯ ಪಡೆದು ದೂರು ದಾಖಲಿಸಿಕೊಳ್ಳಬೇಕೆಂದು ನೆನಪಿಸಿದರು. ಆ ಹೊರತಾಗಿ ಕರ್ತವ್ಯ ನಿರ್ಲಕ್ಷ್ಯ ತೋರಿದರೆ ಇಲಾಖಾ ಮಂದಿಯೂ ದಂಡನೆಗೆ ಒಳಗಾಗಬೇಕೆಂದು ಅಭಿಪ್ರಾಯಿಸಿದರು. ಸುದ್ದಿ ಪ್ರಕಟಿಸುವಲ್ಲಿ ಮಾಧ್ಯಮಗಳು ಕಾನೂನು ಪಾಲಿಸುವದು ಹೊಣೆಗಾರಿಕೆಯೇ ಆಗಿದ್ದು, ಸಮಾಜದ ಒಳಿತಿಗಾಗಿ ಈ ಚೌಕಟ್ಟು ರೂಪಿಸಿಕೊಳ್ಳುವಂತೆ ತಿಳಿಹೇಳಿದರು.
ಮಕ್ಕಳ ಹಕ್ಕು ರಕ್ಷಣೆ
2015ರಿಂದ ಇಡೀ ದೇಶದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 18 ವರ್ಷದೊಳಗಿನ ಪ್ರತಿಯೊಬ್ಬರಿಗೆ ಅವಕಾಶವಿದ್ದು, ಆ ಸಲುವಾಗಿಯೇ ಮಕ್ಕಳ ಕಲ್ಯಾಣ ಸಮಿತಿ ಅಸ್ತಿತ್ವದಲ್ಲಿದೆ. ಈ ಸಮಿತಿಯು ಸಂವಿಧಾನಬದ್ಧ ಹಕ್ಕಿನೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಅತ್ಯಾಚಾರ, ದೌರ್ಜನ್ಯ, ಇನ್ನಿತರ ಯಾವದೇ ರೀತಿ ಶೋಷಣೆಗೆ ಒಳಗಾಗುವವರ ಅಥವಾ ಕಾನೂನು ಸಂಘರ್ಷಕ್ಕೊಳಗಾದ ಬಾಲೆಯರ ಹೆಸರು ಸಹಿತ ಗುರುತು ಪತ್ತೆಯಾಗುವಂತೆ ಸುದ್ದಿ ಪ್ರಕಟಿಸಲು ಕಾನೂನು ನಿರ್ಬಂಧಿಸಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟೀರ ಸೂರಜ್ ಮಾಹಿತಿ ನೀಡಿದರು.
ಉದ್ದೇಶ ಸ್ಪಷ್ಟವಿರಲಿ
ವಕೀಲ ಪಿ. ಕೃಷ್ಣಮೂರ್ತಿ ಅಭಿಪ್ರಾಯ ಮಂಡಿಸುತ್ತಾ, ಉದ್ದೇಶಪೂರ್ವಕ ಯಾರೊಬ್ಬರಿಗೂ ಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ ಮಾನಹಾನಿಗೊಳಿಸದೆ, ಸಮಾಜದ ಹಿತದೃಷ್ಟಿಯಿಂದ ಮಾಧ್ಯಮಗಳು ಸದುದ್ದೇಶದಿಂದ ಸುದ್ದಿಗಳನ್ನು ಅರ್ಥೈಸಿಕೊಂಡು ವಿವೇಚನೆಯಿಂದ ಸುದ್ದಿಗಳನ್ನು ಪ್ರಕಟಿಸುವಂತೆ ಕರೆ ನೀಡಿದರು. ಸಮು, ಸಂದರ್ಭ, ಸನ್ನಿವೇಶಗಳನ್ನು ಪ್ರಕಟಿಸುವ ಹೊಣೆ ಮಾಧ್ಯಮಗಳಿಗೆ ಇರುವದಾಗಿ ಅವರು ಮಾರ್ನುಡಿದರು.
ಕಾನೂನು ತೊಡಕು
ಕೊಡಗಿನಲ್ಲಿ ಸ್ವಯಂ ಕಾನೂನು ಪಾಲಿಸುವವರು ಎಂಬ ಹೆಗ್ಗಳಿಕೆ ಇದೆಯಾದರೂ; ಮಾಧ್ಯಮ ಕ್ಷೇತ್ರದಲ್ಲಿ ಪ್ರತಿ ಹೆಜ್ಜೆಯಲ್ಲೂ ಕಾನೂನಿನ ಜಾರಿಯ ಆತಂಕ ಎದುರಿಸುವಂತಾಗಿದೆ ಎಂದು ಸಂವಾದದಲ್ಲಿ ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ನೋವಿನ ನುಡಿಯಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕಾನೂನಿನ ವ್ಯವಸ್ಥೆಯಡಿ ಇಂದು ಜಿಲ್ಲೆಯಲ್ಲಿ ಮಾಧ್ಯಮ ಕ್ಷೇತ್ರ ಕೂಡ ಅಸಹಾಯಕ ಸ್ಥಿತಿಗೆ ಸಿಲುಕಿದ್ದು, ಜನರಿಗೆ ನೈಜಾಂಶಗಳನ್ನು ತಿಳಿಸಲು ಸಾಧ್ಯವಾಗುತ್ತಿಲ್ಲವೆಂದು ವಿಷಾದಿಸಿದರು.
ಸಮಾಜದಲ್ಲಿ ಶೋಷಣೆ, ದೌರ್ಜನ್ಯಗಳಿಗೆ ಒಳಗಾಗುವವರಿಗೆ ನ್ಯಾಯ ಕಲ್ಪಿಸಲು ಮಾನವೀಯ ನೆಲೆಯಲ್ಲಿ ಕೂಡಾ ಸುದ್ದಿಗಳನ್ನು ಪ್ರಕಟಿಸಲಾರದೆ; ಕಾನೂನಿನಡಿಯಲ್ಲಿ ಅಪರಾಧಗಳನ್ನು ಹತ್ತಿಕ್ಕುವತ್ತ ಬೆಳಕು ಚೆಲ್ಲುವ ಕೆಲಸವನ್ನೂ ಮಾಡಲಾರದೆ ಮಾಧ್ಯಮ ಕ್ಷೇತ್ರ ಮೂಕವೇದನೆ ಅನುಭವಿಸುವಂತಾಗಿದೆ ಎಂದು ಹಲವು ಅಂಶಗಳನ್ನು ನೆನಪಿಸಿದರು.
ಮುಂಜಾಗ್ರತೆಗಾಗಿ ಸಂವಾದ
ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಾಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರು ಹಾಗೂ ಮಾಧ್ಯಮ ಕ್ಷೇತ್ರಗಳಿಂದ ಸುದ್ದಿ ಪ್ರಕಟಿಸುವಲ್ಲಿ ತಪ್ಪುಗಳನ್ನು ತಡೆಗಟ್ಟುವ ಆಶಯದಿಂದ ಮುಂಜಾಗ್ರತಾ ಕ್ರಮವಾಗಿ ಈ ಸಂವಾದ ಆಯೋಜಿಸಿರುವದಾಗಿ ತಿಳಿಸಿದರು. ವೀರಾಜಪೇಟೆ ಕಾವೇರಿ ಕಾಲೇಜು ಹಾಗೂ ಮಡಿಕೇರಿ ಫೀ.ಮಾ. ಕಾರ್ಯಪ್ಪ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಹಿತ ಮಾಧ್ಯಮ ಬಳಗದವರು ಸಂವಾದದಲ್ಲಿ ಪಾಲ್ಗೊಂಡು ಅನೇಕ ಸಂಶಯಗಳನ್ನು ಚರ್ಚೆ ಮೂಲಕ ಬಗೆಹರಿಸಿಕೊಂಡರು. ವಿದ್ಯಾರ್ಥಿಗಳಿಗೆ ಪ್ರಶಂಸಾಪತ್ರ ನೀಡಲಾಯಿತು. ಪ್ರೆಸ್‍ಕ್ಲಬ್ ಬಳಗದ ಲೋಕೇಶ್ ಸಾಗರ್ ಪ್ರಾರ್ಥಿಸಿದರು. ಪ್ರ.ಕಾರ್ಯದರ್ಶಿ ಸುಬ್ರಮಣಿ ಸ್ವಾಗತಿಸಿ, ಕಿಶೋರ್ ರೈ ಹಾಗೂ ಎಂ.ಎ. ಅಜೀಜ್ ನಿರೂಪಿಸಿದರು. ಎಸ್.ಎ. ಮುಬಾರಕ್ ವಂದಿಸಿದರು.
ಪೊಲೀಸ್ ಸಿಬ್ಬಂದಿ ಸುಮತಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಸಂಶಯಗಳಿಗೆ ತೆರೆ ಎಳೆದರು.