ಮಡಿಕೇರಿ, ಮಾ. 14: ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ತಾ.16ರಂದು ಬೆಂಗಳೂರಿನಲ್ಲಿ ವಿಶ್ವವಿದ್ಯಾನಿಲಯಗಳ ಕುಲಪತಿಗಳ ಹಾಗೂ ಕುಲಸಚಿವರ ತುರ್ತು ಸಭೆಯನ್ನು ಕರೆದಿರುವ ಹಿನ್ನೆಲೆಯಲ್ಲಿ ತಾ. 16ರಂದು ಪೂರ್ವಾಹ್ನ 10.30ಕ್ಕೆ ನಿಗದಿಯಾಗಿದ್ದ ಮಂಗಳೂರು ವಿಶ್ವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ 2018-19ನೇ ಸಾಲಿನ ನಾಲ್ಕನೆಯ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದ್ದು, ಆ ಸಭೆಯು ತಾ. 19ರಂದು ಪೂರ್ವಾಹ್ನ 11 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿಯ ಆಡಳಿತ ಸೌಧದ ಹೊಸ ಸೆನೆಟ್ ಸಭಾಂಗಣದಲ್ಲಿ ನಡೆಯಲಿದೆ.