ಗೋಣಿಕೊಪ್ಪ ವರದಿ, ಮಾ. 14 : ಬಸ್ ಹರಿದು ವ್ಯಕ್ತಿ ಸಾವನಪ್ಪಿರುವ ಘಟನೆ ನಾಣಚ್ಚಿ ಗ್ರಾಮದಲ್ಲಿ ನಡೆದಿದೆ. ಆದಿವಾಸಿ ವಿಶ್ವ (30) ಮೃತ ವ್ಯಕ್ತಿ. ಚಾಲಕ ಆದಿನಾರಾಯಣಸ್ವಾಮಿ (60) ವಿರುದ್ಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾಗರಹೊಳೆ ಉದ್ಯಾನವನದ ಸಫಾರಿ ಬಸ್ ನಾಣಚ್ಚಿಯತ್ತ ಬರುತ್ತಿದ್ದಾಗ ವಿಶ್ವ ರಸ್ತೆ ಬದಿಯಲ್ಲಿ ಮಲಗಿದ್ದದ್ದು ಚಾಲಕನಿಗೆ ಕಾಣಿಸಲಿಲ್ಲ ಎನ್ನಲಾಗಿದ್ದು, ಆಕಸ್ಮಾತ್ ನಡೆದ ಘಟನೆಯಲ್ಲಿ ಅದೇ ರಸ್ತೆ ಜಂಕ್ಷನ್‍ನಲ್ಲಿ ಬಸ್ ತಿರುಗಿಸುವಾಗ ತಲೆಗೆ ಬಸ್ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದರು.

ಪ್ರತಿಭಟನೆ : ಅಪಘಾತದಿಂದ ಸಾವಿಗೀಡಾದ ವಿಶ್ವ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಶವವಿಟ್ಟು ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಯಿತು. ಮೇಲಾಧಿಕಾರಿಗಳು ಆಗಮಿಸಿ ಭರವಸೆ ನೀಡುವಂತೆ ಒತ್ತಾಯಿಸಲಾಯಿತು. - ಸುದ್ದಿಪುತ್ರ