ಮಡಿಕೇರಿ, ಮಾ. 14: ತಾ. 4ರ ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ತಾಯಿಗೆ ಸಜೆ’ ಸುದ್ದಿಗೆ ಸಂಬಂಧಿಸಿದಂತೆ ವೀರಾಜಪೇಟೆ ವಕೀಲ ಕೆ.ಸಿ. ಪ್ರದ್ಯುಮ್ನ ಅವರು ಪ್ರತಿಕ್ರಿಯಿಸಿ ಸುದ್ದಿಯಲ್ಲಿ ಲೋಪವಿದ್ದು, ವಿವರಣೆ ನೀಡಿದ್ದಾರೆ.
ಪಣಿ ಎರವರ ಚುಂಡೆ ಎಂಬಾಕೆಯ ಮೇಲೆ ಕುಟ್ಟ ಪೊಲೀಸರು ಅವಳ ಮಗಳ ಸಾವಿನ ಬಗ್ಗೆ 302 ಐಪಿಸಿ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದು, ಆರೋಪ ಪಟ್ಟಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ವಿಚಾರಣೆ ಕೈಗೊಂಡ ವೀರಾಜಪೇಟೆ ಅಪರ ಜಿಲ್ಲಾ ನ್ಯಾಯಾಲಯವು ಚುಂಡೆಯನ್ನು ಕೊಲೆ ಆರೋಪದಿಂದ (302 ಐಪಿಸಿ) ಬಿಡುಗಡೆ ಗೊಳಿಸಿರುತ್ತದೆ.
ಆದರೆ ಚುಂಡೆಗೆ ಐಪಿಸಿ 304(2)ರ ಪ್ರಕಾರ ಕೊಲೆಯಲ್ಲದೆ ದಂಡನೆ ಮಾನವ ಹತ್ಯೆಕ್ಕೆ ಶಿಕ್ಷೆ ವಿಧಿಸಿದೆ.