ಮಡಿಕೇರಿ, ಮಾ. 14: ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಅಲ್ಲಿನ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿರುವ ಕೊಡಗಿನ ಪಿ.ಸಿ. ವಿನಿತ ಅವರನ್ನು ಸನ್ಮಾನಿಸಲಾಯಿತು. ಅಲ್ಲಿನ ಚಾಮರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ 18 ವರ್ಷಗಳಿಂದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಕೀಲೆಯಾಗಿ ಸೇವೆ ಸಲ್ಲಿಸುತ್ತಿರುವ ವಿನಿತ ಅವರನ್ನು ಗೌರವಿಸಲಾಯಿತು.

ಇವರು ಶ್ರೀಮಂಗಲ ನಿವೃತ್ತ ಎಸ್.ಐ. ಪುಗ್ಗೆರ ಚಂಗಪ್ಪ ಹಾಗೂ ರೇವತಿ ದಂಪತಿಯ ಪುತ್ರಿಯಾಗಿದ್ದು, ದೇವಣಗೇರಿಯ ಮೇದುರ ಬಿಪಿನ್ ಅವರ ಪತ್ನಿ.