ನಾಪೆÇೀಕ್ಲು, ಮಾ. 14: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತ ಯಂತ್ರದ ಬಗ್ಗೆ ಮತದಾರರಿಗೆ ಅರಿವು ಮೂಡಿಸಲು ಕಕ್ಕಬ್ಬೆ ಗ್ರಾಮ ಪಂಚಾಯಿತಿಯಲ್ಲಿ ಪ್ರಾತ್ಯಕ್ಷತೆ ನಡೆಯಿತು.

ಪ್ರಾತ್ಯಕ್ಷತೆಯನ್ನು ಸೆಕ್ಟರ್ ಅಧಿಕಾರಿ ಚಿಕ್ಕಬಸವಯ್ಯ ನಡೆಸಿದರು. ಈ ಸಂದರ್ಭದಲ್ಲಿ ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಉಪಾಧ್ಯಕ್ಷ ವಯಕೋಲ್ ಉಸ್ಮಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಚಿನ್, ಶಿಕ್ಷಕಿ ಸುಮಯ್ಯ ಮತ್ತಿತರರಿದ್ದರು.