ನಾಪೆÇೀಕ್ಲು, ಮಾ. 14: ಕೊಡಗಿನ ಮಳೆದೇವ, ಬೆಳೆದೇವ, ಕುಲದೇವ ಎಂದು ಪ್ರಖ್ಯಾತಿ ಪಡೆದಿರುವ ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವವು ತಾ. 20ರಂದು ವಿಜೃಂಭಣೆಯಿಂದ ನಡೆಯಲಿದೆ.ತಾ. 20ರ ಬುಧವಾರ ಬೆಳಿಗ್ಗೆ ದೇವಳದ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತು ಪೆÇೀರಾಟ ಮತ್ತು ಬಲಿವಾಡುವಿನ ಆಗಮನದಿಂದ ಆರಂಭಗೊಳ್ಳುವ ಉತ್ಸವದಲ್ಲಿ ದೇವಳಕ್ಕೆ ಸಂಬಂಧಿಸಿದ ತಕ್ಕಮುಖ್ಯಸ್ಥರ ಎತ್ತು ಪೆÇೀರಾಟ ಸೇವೆಗಳೂ ಸಂಪ್ರದಾಯದಂತೆ ನಡೆಯಲಿದೆ. ಅನಂತರ ಭಕ್ತರ ತುಲಾಭಾರ ಸೇವೆಗಳು, ಮಧ್ಯಾಹ್ನದ ಮಹಾಪೂಜೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿಯೊಂದಿಗೆ 5 ಕಿ.ಮೀ. ದೂರದ ಆದಿ ಸ್ಥಳ ಮಲ್ಮ ಬೆಟ್ಟಕ್ಕೆ ತೆರಳಿ ಪೂಜೆ ನಡೆಸಲಾಗುವದು. ಈ ಸಂದರ್ಭದಲ್ಲಿ ಸಮೀಪದ ನೆಲಜಿ ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು, ಹಾಗೂ ಪೇರೂರು ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು ಭಕ್ತಾದಿಗಳು ಎತ್ತು ಪೆÇೀರಾಟದೊಂದಿಗೆ ಮಲ್ಮ ಬೆಟ್ಟದಲ್ಲಿ ಹಾಜರಿರುತ್ತಾರೆ. ಮೂರು ಇಗ್ಗುತ್ತಪ್ಪ ದೇವಾಲಯಗಳ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ದೈವಿಕ ವಿಧಿವಿಧಾನಗಳು, ನೈವೇಧ್ಯ, ಪೂಜೆ, ಹರಕೆ ಸೇವೆಗಳನ್ನು ನೆರವೇರಿಸಿ ದೇವ ಕಟ್ಟನ್ನು ಹಿಂತೆಗೆಯಲಾಗುವದು. ಬಳಿಕ ರಾತ್ರಿ ದೇವಳದಲ್ಲಿ ಉತ್ಸವ ಮೂರ್ತಿಯ ನೃತ್ಯೋತ್ಸವದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಳ್ಳಲಿದೆ.

ದೈವಿಕ ವಿಧಿವಿಧಾನಗಳನ್ನು ಪಾರಂಪರಿಕ ವೇಧ ಮೂರ್ತಿಗಳಾದ ಕುಶ ಭಟ್, ಲವ ಭಟ್, ಮತ್ತಿತರರು ನೆರವೇರಿಸಲಿರುವರು ಎಂದರು.

-ಪಿ.ವಿ.ಪ್ರಭಾಕರ್