ಪೊನ್ನಂಪೇಟೆ, ಮಾ. 13: ವೀರಾಜಪೇಟೆ ಸಮೀಪದ ಜಿ.ವೈ.ಸಿ. ಗುಂಡಿಕೆರೆ ಫ್ರೆಂಡ್ಸ್ ವತಿಯಿಂದ ತಾ. 22ರಂದು ಗುಂಡಿಕೆರೆಯಲ್ಲಿ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 3 ಗಂಟೆಯಿಂದ ಗ್ರಾಮದ ಗದ್ದೆ ಮೈದಾನದಲ್ಲಿ ಆರಂಭಗೊಳ್ಳಲಿರುವ ಈ ಪಂದ್ಯಾವಳಿಯಲ್ಲಿ ಜಿಲ್ಲೆಯ 15 ತಂಡಗಳು ಪಾಲ್ಗೊಳ್ಳಲಿವೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪದಾಧಿಕಾರಿಗಳಾದ ಎಂ.ಎ. ಶಫೀಕ್, ಮೊ: 9108002109, ಎಂ.ಹೆಚ್. ರಝಾಕ್, ಮೊ: 7760110462 ಅಥವಾ ಎಂ.ಎಸ್. ಸೈದು, ಮೊ: 9535251975 ಅವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.