ಪೊನ್ನಂಪೇಟೆ, ಮಾ. 12 : ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ದೇವರ ವಾರ್ಷಿಕ ಹಬ್ಬವು ತಾ. 20ರಂದು ಉತ್ತರ ನಕ್ಷತ್ರದಲ್ಲಿ ಸಂಜೆ 7 ಗಂಟೆಗೆ ದೇವರ ಕೊಡಿಮರ ನಿಲ್ಲುವದರೊಂದಿಗೆ ಆರಂಭವಾಗಲಿದೆ.
ತಾ. 24ರ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪೂಜಾ ಕಾರ್ಯಕ್ರಮ ಹಾಗೂ ಅಪರಾಹ್ನ 4 ಗಂಟೆಗೆ ದೇವರು ಹೊರಬರುವದು, ಭಂಡಾರ ನಂತರ ದೇವರ ಕೆರೆಯಲ್ಲಿ ಅವಭೃತ ಸ್ನಾನ ನಡೆಯಲಿದೆ.