ನಾಪೆÇೀಕ್ಲು, ಮಾ. 13: ನಾಪೆÇೀಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೀಡಿಂಗ್ ಕ್ಲಬ್ ಉದ್ಘಾಟನೆ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕಿ ಡಾ. ಅನುಪಮ ಸಭಾಪತಿ ಪ್ರತಿ ಕಾಲೇಜಿನಲ್ಲಿಯೂ ರೀಡಿಂಗ್ ಕ್ಲಬ್‍ನ ಅವಶ್ಯಕತೆ ಇದೆ. ಇದರಿಂದ ವಿದ್ಯಾರ್ಥಿಗಳು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಬಹುದು. ರೀಡಿಂಗ್ ಕ್ಲಬ್‍ಗಳಿಂದ ಸಮಾಜವನ್ನು ಸಂಘಟಿಸಲು ಸಾಧ್ಯ. ಪÀÅಸ್ತಕಗಳನ್ನು ಓದುವದರಿಂದ ಜ್ಞಾನ ಸಂಪಾದನೆ ಮಾತ್ರವಲ್ಲ, ಲೋಕಜ್ಞಾನದ ಅರಿವು ಮೂಡುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕವಯಿತ್ರಿ ಸ್ಮಿತಾ ಅಮೃತರಾಜ್ ಮಹಿಳಾ ಸಂವೇದನೆ ಬಗ್ಗೆ ಮಾತನಾಡಿ, ಸಮಾಜದಲ್ಲಿ ಸ್ತ್ರೀಗೆ ಉನ್ನತವಾದ ಸ್ಥಾನಮಾನವಿದೆ. ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮಹಿಳೆಯರದ್ದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಬಾರ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಕೆ. ಅರವಿಂದ ಮಿತ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕೆ.ಎಂ. ಮುದ್ದಪ್ಪ, ವಿನೋದ್ ಬಿ.ಎಸ್, ಮನೋಜ್‍ಕುಮಾರ್, ಹೆಚ್.ಎಸ್. ನಂದೀಶ್ ಹಾಗೂ ಸುಧಾಕರ್ ಉಪಸ್ಥಿತರಿದ್ದರು.

ಮಹಿಳಾ ದಿನಾಚರಣೆ ಅಂಗವಾಗಿ ಕವಯಿತ್ರಿ ಸ್ಮಿತಾ ಅಮೃತರಾಜ್, ಸಹಾಯಕ ಪ್ರಾಧ್ಯಾಪಕಿ ಅನುಪಮ ಸಭಾಪತಿ ಅವರನ್ನು ಸನ್ಮಾನಿಸಲಾಯಿತು.