ಸಿದ್ದಾಪುರ, ಮಾ. 13: ಸ್ಥಳೀಯ ವಿ ಸೆವೆನ್ ಯುವಕ ಸಂಘದ 21ನೇ ವಾರ್ಷಿಕೋತ್ಸವ ಅಂಗವಾಗಿ ಸಿದ್ದಾಪುರ ಚರ್ಚ್ ಮೈದಾನದಲ್ಲಿ ಹೊನಲು ಬೆಳಕಿನ ಜಿಲ್ಲಾಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಹೆಚ್. ಮೂಸ ತಿಳಿಸಿದ್ದಾರೆ

ಸಂಘದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಡಗು ಜಿಲ್ಲಾ ಕಬಡ್ಡಿ ಅಸೋಸಿ ಯೇಷನ್ ಸಹಕಾರ ದೊಂದಿಗೆ ಚಾಂಪಿಯನ್ ಶಿಪ್ ಪಂದ್ಯಾವಳಿ ತಾ. 17 ರಂದು ನಡೆಯಲಿದೆ. ಕಳೆದ ಹಲವು ವರ್ಷಗಳಿಂದಲೂ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿ ಜಿಲ್ಲೆಯ ಯುವ ಕ್ರೀಡಾ ಪಟುಗಳಿಗೆ ಅವಕಾಶ ನೀಡಲಾಗುತ್ತಿದ್ದು, ಜಿಲ್ಲೆಯ 25ಕ್ಕೂ ಹೆಚ್ಚು ತಂಡಗಳು ಹೆಸರು ನೋಂದಾಯಿಸಿಕೊಂಡು ಪಂದ್ಯಾವಳಿಯಲ್ಲಿ ಭಾಗವಹಿಸ ಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮ ದಂದು ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದೆ. ಜಿಲ್ಲೆಯ ಸಮಾಜ ಸೇವಕರು ಹಾಗೂ ದಾನಿಗಳು ಭಾಗವಹಿಸಲಿದ್ದಾರೆ ಎಂದರು.

ಪ್ರಥಮ ವಿಜೇತ ತಂಡಕ್ಕೆ ರೂ. 11.111 ನಗದು ಮತ್ತು ಟ್ರೋಫಿ, ದ್ವಿತೀಯ ತಂಡಕ್ಕೆ ರೂ. 7.777 ನಗದು ಮತ್ತು ಟ್ರೋಫಿ, ತೃತೀಯ ತಂಡಕ್ಕೆ ರೂ. 5.555 ನಗದು ಮತ್ತು ಟ್ರೋಫಿ ಹಾಗೂ ಚತುರ್ಥ ಬಹುಮಾನ ರೂ. 3.333 ನಗದು ಟ್ರೋಫಿ ನೀಡಲಾಗುವದು. ಇದರೊಂದಿಗೆ ಪಂದ್ಯ ಪುರುಷೋತ್ತಮ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಉತ್ತಮ ತಂಡಗಳಿಗೆ ಬಹುಮಾನ ನೀಡಲಾಗುವದು ಎಂದರು.

ಈ ಸಂದರ್ಭ ಉಪಾಧ್ಯಕ್ಷ ಅಯ್ಯ, ಪ್ರಧಾನ ಕಾರ್ಯದರ್ಶಿ ವಿ.ಕೆ. ಜಾಫರ್, ಸಹ ಕಾರ್ಯ ದರ್ಶಿ ಸಂತೋಷ, ಸಮಿತಿಯ ಪ್ರಮುಖರಾದ ಖಾದರ್, ಚಂದ್ರ, ವರ್ಗೀಸ್, ನಾಸೀರ್, ಶೇಖರ್ ಉಪಸ್ಥಿತರಿದ್ದರು.