ಸುಂಟಿಕೊಪ್ಪ, ಮಾ. 13: ರಸ್ತೆ ಆಗೆದು ಹಾಕಿ ಜನಸಾಮಾನ್ಯರು ನಾದÀ ಕಚೇರಿಗೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಸಾರ್ವಜನಿಕರು, ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ.

ಸುಂಟಿಕೊಪ್ಪ-ಮಾದಾಪುರ ಮುಖ್ಯ ರಸ್ತೆಯಿಂದ ನಾಡ ಕಚೇರಿಗೆ ತೆರಳುವ ರಸ್ತೆ ಕಾಮಗಾರಿಯ ಅರ್ಧಭಾಗ ಕಳೆದ ವರ್ಷ ತಾಲೂಕು ಪಂಚಾಯಿತಿ ಅನುದಾನದಿಂದ ನಿರ್ಮಿಸಲಾಗಿತ್ತು. ಇನ್ನುಳಿದ ಅರ್ಧ ಭಾಗದ ರಸ್ತೆ ತೀರಾ ಹಾಳಾಗಿದ್ದು, ಗುಂಡಿಬಿದ್ದು ವಾಹನ, ಆಟೋರಿಕ್ಷಾ ಚಾಲಕರು ಹರಸಾಹಸದಿಂದ ಈ ರಸ್ತೆಗಾಗಿ ವಾಹನ ಚಾಲಿಸುವಂತಾಗಿತ್ತು.

ಇದೀಗ 10 ದಿನದ ಹಿಂದೆ ರಸ್ತೆ ದುರಸ್ಥಿಪಡಿಸಲು ಇದ್ದ ರಸ್ತೆಯನ್ನು ಅಗೆದು ಹಾಕಲಾಗಿದೆ. ಈಗ ನಾಡ ಕಚೇರಿಗೆ ವಾಹನ ತೆರಳಲು ಸಾಧ್ಯವಾಗುತ್ತಿಲ್ಲ ಸಾರ್ವಜನಿಕರು ವಯೋವೃದ್ಧರು, ವಿಕಲಚೇತನರು ಈ ರಸ್ತೆಗಾಗಿ ನಡೆದಾಡಲು ಪ್ರಯಾಸ ಪಡುತ್ತಿದ್ದಾರೆ.

ಸಂಬಂಧಿಸಿದ ಗುತ್ತಿಗೆದಾರರೊಬ್ಬರು ತನಗೇ ಕಾಮಗಾರಿ ಸಿಗಲೆಂದು ತರಾತುರಿಯಲ್ಲಿ ರಸ್ತೆಯನ್ನು ಅಗೆದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ.

ಈ ಗುತ್ತಿಗೆದಾರರಿಗೆ ಕೆಲ ಗ್ರಾ.ಪಂ. ಸದಸ್ಯರು ಬೆಂಬಲ ನೀಡಿದ್ದಾರೆ ಇದರಿಂದ ಒಟ್ಟಾರೆ ಜನರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುಂಚಿತವಾಗಿ ರಸ್ತೆ ಕಾಮಗಾರಿಗೆ ಅನುಮೋದನೆ ಲಭಿಸಿದ್ದು, ಕೂಡಲೇ ಕಾಮಗಾರಿ ಆರಂಭಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.