ಸೋಮವಾರಪೇಟೆ, ಮಾ. 13: ಇಲ್ಲಿನ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ದಿನದ ಅಂಗವಾಗಿ ಶಾಲೆಯ ಶಿಕ್ಷಕರುಗಳಿಗೆ ಶಾಲಾ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಪ್ರಬಾರ ಮುಖ್ಯ ಶಿಕ್ಷಕಿ ಕವಿತಾ ಮಾತನಾಡಿ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದು, ದೇಶದ ರಕ್ಷಣಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವದು ಶ್ಲಾಘನೀಯ. ಮಹಿಳೆಯರು ಸುಶಿಕ್ಷಿತರಾದಲ್ಲಿ ಸಾಮಾಜಿಕವಾಗಿ ಉನ್ನತಿ ಕಾಣಬಹುದು ಎಂದು ಅಭಿಪ್ರಾಯಿಸಿದರು.
ಶಾಲಾ ವಿದ್ಯಾರ್ಥಿಗಳೇ ಶಿಕ್ಷಕರಿಗೆ ಆಯೋಜಿಸಿದ್ದ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಶಿಕ್ಷಕಿ ಶಮಂತ ಪ್ರಥಮ, ಪಾರ್ವತಿ ದ್ವಿತೀಯ, ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಸುಮತಿ ಪ್ರಥಮ, ರಮ್ಯ ದ್ವಿತೀಯ ಸ್ಥಾನಗಳಿಸಿದರು. ವಿಜೇತ ಶಿಕ್ಷಕರಿಗೆ ವಿದ್ಯಾರ್ಥಿಗಳು ಬಹುಮಾನ ವಿತರಿಸಿದರು.