ಮಡಿಕೇರಿ, ಮಾ. 13: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ನಿವಾಸಿ ತೇಲಪಂಡ ಸುಬ್ರಮಣಿ (42) ಎಂಬವರು ಫೆಬ್ರವರಿ 12 ರಂದು ಹಾಲುಗುಂದದ ಮನೆಯಿಂದ ತೆರಳಿದವರು ಇನ್ನೂ ಹಿಂತಿರುಗಿಲ್ಲ. ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿರುವದಾಗಿ ಪತ್ನಿ ಸುನಿತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಸಿದ್ದಾಪುರ ಠಾಣೆ (258333) ಅಥವಾ ಎಸ್.ಪಿ. ಕಚೇರಿ (229000) ಸಂಖ್ಯೆಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.