*ಗೋಣಿಕೊಪ್ಪಲು, ಮಾ. 13: ಕೆ.ಎನ್.ಎಸ್.ಎಸ್ ಮತ್ತು ಭಗತ್ ಸಿಂಗ್ ಯುವಕ ಸಂಘ ಆಶ್ರಯದಲ್ಲಿ ಏಪ್ರಿಲ್ 5 ರಿಂದ ಜಿಲ್ಲಾ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ ಎಂದು ಭಗತ್ ಸಿಂಗ್ ಯುವಕ ಸಂಘದ ಕಾರ್ಯದರ್ಶಿ ಸಿ.ಕೆ. ವೇಣುಗೋಪಾಲ್ ತಿಳಿಸಿದ್ದಾರೆ.

ಅರುವತ್ತೋಕ್ಲು ಬೈಪಾಸ್ ರಸ್ತೆಯಲ್ಲಿರುವ ಖಾಸಗಿ ಸ್ಥಳದಲ್ಲಿ ಮೂರು ದಿನಗಳು ಪಂದ್ಯಾಟ ನಡೆಯಲಿದೆ.

ಏಪ್ರಿಲ್ 5 ರಿಂದ 7+2 ಕಾಲ್ಚೆಂಡು ಪಂದ್ಯಾಟ ಪ್ರಾರಂಭ ವಾಗಲಿದ್ದು, 7 ರಂದು ಅಂತಿಮ ಪಂದ್ಯ ನಡೆದು ಸಮಾರೋಪ ಗೊಳ್ಳಲಿದೆ ಎಂದು ಹೇಳಿದರು.

ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದ್ದು ಪ್ರಥಮ ಸ್ಥಾನಕ್ಕೆ ನಗದು ರೂ.25,555 ಹಾಗೂ ಪಾರಿತೋಷಕವನ್ನು ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ನಗದು ರೂಪದಲ್ಲಿ 15,555 ರೂಪಾಯಿಗಳನ್ನು ಪಾರಿತೋಷಕವನ್ನು ಕೊಡಲಾಗುವದು. ಇದರೊಂದಿಗೆ ತೃತೀಯ ಸ್ಥಾನಕ್ಕೆ ಆಕರ್ಷಕ ಪಾರಿತೋಷಕ ನೀಡಲಾಗು ವದು ಎಂದು ಮಾಹಿತಿ ನೀಡಿದರು.

ಆಸಕ್ತ ತಂಡಗಳು ಮಾರ್ಚ್ 20 ರೊಳಗೆ ಮೈದಾನ ಶುಲ್ಕದೊಂದಿಗೆ ತಂಡದ ಹೆಸರನ್ನು ನೊಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗೆ 9886545383, 9448448730 ಹಾಗೂ 7760918424ಗೆ ಕರೆ ಮಾಡುವಂತೆ ತಿಳಿಸಿದರು.

ಗೋಷ್ಠಿಯಲ್ಲಿ ಭಗತ್ ಸಿಂಗ್ ಯುವಕ ಸಂಘದ ಅಧ್ಯಕ್ಷ ಸತೀಶ್ ಸಿಂಗಿ, ಖಜಾಂಜಿ ಪ್ರದೀಪ್, ಲೋಹಿತ್, ಪವಿತ್ರನ್, ಶ್ರೀನಿವಾಸ್, ವೇಣುಗೋಪಾಲ್ ಮೇನೂನ್ ಉಪಸ್ಥಿತರಿದ್ದರು.