ಮಡಿಕೇರಿ, ಮಾ. 12: ಹಲವಾರು ದಶಕಗಳಿಂದ ಪೊನ್ನಂಪೇಟೆ ತಾಲೂಕಿಗಾಗಿ ಮಾಡಿದ ಹೋರಾಟಕ್ಕೆ ಸ್ಪಂದಿಸಿ ಕುಮಾರಸ್ವಾಮಿಯವರು ಪೊನ್ನಂಪೇಟೆಯನ್ನು ನೂತನ ತಾಲೂಕು ಮಾಡಿರುವದು ಈ ಭಾಗದ ಜನರಿಗೆ ಹರ್ಷ ತಂದಿದೆ. ಕುಶಾಲನಗರದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳು ತಾಲೂಕು ಘೋಷಣೆ ಮಾಡುತ್ತಿದ್ದಂತೆ ನೆರೆದಿದ್ದ ಜನರು ಹರ್ಷವ್ಯಕ್ತಪಡಿಸಿದರು. ಕುಮಾರಸ್ವಾಮಿಯವರನ್ನು ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಮಾಚಯ್ಯ ಮತ್ತು ಸದಸ್ಯರು ಹಾರಂಗಿಯಲ್ಲಿ ಸ್ವಾಗತಿಸಿ ಬರಮಾಡಿಕೊಂಡರು. ತದನಂತರ ಕುಶಾಲನಗರದ ಬಸವನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಪೊನ್ನಂಪೇಟೆ ತಾಲೂಕು ಘೋಷಣೆ ಆಗುತ್ತಿದ್ದಂತೆ ಹೋರಾಟ ಸಮಿತಿ ಸದಸ್ಯ ವಕೀಲ ಎ.ಟಿ. ಕಾರ್ಯಪ್ಪ, ಅಧ್ಯಕ್ಷರಾದ ಅರುಣ್ ಮಾಚಯ್ಯ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ವೇದಿಕೆಯಲ್ಲಿದ್ದ ಸಚಿವರಾದ ಪುಟ್ಟರಾಜು, ಸಾ.ರಾ. ಮಹೇಶ್, ಶಾಸಕರಾದ ಎಂ.ಪಿ. ವಿಶ್ವನಾಥ್‍ರವರನ್ನು ಪೊನ್ನಂಪೇಟೆ ನಾಗರಿಕ ವೇದಿಕೆಯ ಪದಾಧಿಕಾರಿಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಸಮಯದಲ್ಲಿ ಮಾಂಗೇರ ಪದ್ಮಿನಿ ಪೊನ್ನಪ್ಪ, ಐನಂಡ ಬೋಪಣ್ಣ, ಪೂಣಚ್ಚ, ಸಿ.ಎಂ. ಪೊನ್ನಪ್ಪ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಎಂ.ಪಿ. ಅಪ್ಪಚ್ಚು, ಪುಚ್ಚಿಮಾಡ ಹರೀಶ್, ಎಂ.ಎನ್. ಕುಶಾಲಪ್ಪ, ಎರ್ಮು ಹಾಜಿ, ಟಾಟು ಮೊಣ್ಣಪ್ಪ, ಸೆಲ್ವರಾಜು, ಎಂ.ಎಂ. ಅಯ್ಯಪ್ಪ ಹಾಜರಿದ್ದರು.