ಮಡಿಕೇರಿ, ಮಾ. 12: ಅಗತ್ಯ ಮಿತಿಗಿಂತ ಮೀರಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಅಬಕಾರಿ ಅಧಿಕಾರಿಗಳು ಮದ್ಯ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ವೀರಾಜಪೇಟೆ ವ್ಯಾಪ್ತಿಯಲ್ಲಿ ಟಾಟಾ ಇಂಡಿಗೋ ಕಾರಿನಲ್ಲಿ 17.5 ಲೀ. ಮದ್ಯವನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿರುವ ಅಬಕಾರಿ ಅಧಿಕಾರಿಗಳು ರೂ.4,800 ಮೊತ್ತದ ಮದ್ಯ ಹಾಗೂ ರೂ. 3 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದ್ದಾರೆ. ಧಾಳಿಯಲ್ಲಿ ವೀರಾಜಪೇಟೆ ವಿಭಾಗದ ಅಬಕಾರಿ ನಿರೀಕ್ಷಕ ಮೋಹನ್ ಕುಮಾರ್, ಉಪ ನಿರೀಕ್ಷಕರಾದ ಹರೀಶ್ ಕುಮಾರ್, ರಾಘವೇಂದ್ರ, ಚಾಲಕ ಗೋಪಿ ಪಾಲ್ಗೊಂಡಿದ್ದರು.