ಕೂಡಿಗೆ, ಮಾ. 13: ಹಾರಂಗಿ- ಯಡವನಾಡು ರಸ್ತೆಯಲ್ಲಿ ಹತ್ತಕ್ಕೂ ಹೆಚ್ಚು ಮರಗಳು ಅಪಾಯ ಹಂತದಲ್ಲಿದ್ದುದನ್ನು ಅರಿತು ಸಾರ್ವಜನಿಕರು ಅರಣ್ಯ ಇಲಾಖೆಗೆ ಮರಗಳನ್ನು ತೆರವುಗೊಳಿಸುವಂತೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಬುಧವಾರ ಹುದುಗೂರು ಅರಣ್ಯ ಉಪ ವಿಭಾಗದ ವತಿಯಿಂದ ಅಪಾಯದಂಚಿನಲ್ಲಿದ್ದ ಹಲವಾರು ಜಾತಿಯ ಮರಗಳನ್ನು ತೆರವುಗೊಳಿಸಲಾಯಿತು.
ಮರ ತೆರವು ಕಾರ್ಯಾಚರಣೆಯಲ್ಲಿ ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಸತೀಶ್, ಸಿಬ್ಬಂದಿಗಳಾದ ಲೋಕೇಶ್, ರಾಜಪ್ಪ, ವಿದ್ಯುತ್ ಸರಬರಾಜು ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.