ಕುಶಾಲನಗರ, ಮಾ 11: ಕುಶಾಲನಗರ ವಾಸವಿ ಯುವತಿಯರ ಸಂಘದ ವತಿಯಿಂದ ಪ್ರಕೃತಿ ವಿಕೋಪಕ್ಕೆ ಒಳಗಾದ ಸಂತ್ರಸ್ತ ಮಹಿಳೆಗೆ ಗೋವೊಂದನ್ನು ದಾನ ನೀಡಿದ್ದಾರೆ. ಮಾದಾಪುರ ಇಗ್ಗೋಡ್ಲು ಗ್ರಾಮದ ಗೀತಾ ಎಂಬವರು ಸಂತ್ರಸ್ತ ಮಹಿಳೆಯಾಗಿದ್ದು ಅವರಿಗೆ ಹಸು ಮತ್ತು ಕರುವನ್ನು ಹಸ್ತಾಂತರಿಸಿದರು. ಕುಶಾಲನಗರ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಗೋವನ್ನು ಹಸ್ತಾಂತರಿಸಲಾಯಿತು.

ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಶ್ರೀಲಕ್ಷ್ಮಿ, ಕಾರ್ಯದರ್ಶಿ ಕನ್ನಿಕನಾಗ್, ಉಪಾಧ್ಯಕ್ಷೆ ಲಕ್ಷ್ಮಿ ಸುಬ್ಬರಾಜು, ಖಜಾಂಜಿ ಪ್ರತಿಮಾ, ನಿರ್ದೇಶಕರಾದ ವತ್ಸಲ, ಸ್ನೇಹ ನಿತಿನ್, ಹೇಮ ರಾಘವೇಂದ್ರ, ಕುಸುಮ ಸುಕೇಶ್, ಅಶ್ವಿನಿ ಆರ್ ಕುಮಾರ್, ಆರ್ಯ ವ್ಯಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ ಮತ್ತಿತರರು ಇದ್ದರು.