ಮಡಿಕೇರಿ, ಮಾ. 11: ಜಿಲ್ಲೆಯ ನಾಪೋಕ್ಲು, ಚೆಯ್ಯಂಡಾಣೆ, ಪಾರಾಣೆ ಮುಂತಾದೆಡೆ ನಿನ್ನೆ ಮಳೆಯಾಗಿರುವ ಬೆನ್ನಲ್ಲೇ ಇಂದು ಬೆಳಗಿನ ಜಾವ ಜಿಲ್ಲಾ ಕೇಂದ್ರ ಮಡಿಕೇರಿಗೆ ಉತ್ತಮ ಮಳೆಯಾಗಿದೆ. ಸಾಕಷ್ಟು ದೂಳು ಮರೆಯಾಗಿ ಭುವಿ ತಂಪಾಗಿದೆ. ಮಾತ್ರವಲ್ಲದೆ ಹಗಲು ಕೂಡ ಅಪರಾಹ್ನ 4 ಗಂಟೆ ಸುಮಾರಿಗೆ ಕೆಲಹೊತ್ತು ಮಳೆಯಾಗಿದೆ. ಬಿಸಿಲಿನ ತಾಪ ಏರುತ್ತಿರುವದರ ನಡುವೆ ಈ ಮಳೆಯಿಂದ ಒಂದಿಷ್ಟು ತಂಪು ವಾತಾವರಣ ಗೋಚರಿಸಿತು.ಆದರೆ ಇಂದು ಕಾಣಿಸಿಕೊಂಡ ಗುಡುಗಿನ ನಡುವೆ ಆಗಿಂದಾಗ್ಗೆ ವಿದ್ಯುತ್ ಮತ್ತು ಟೆಲಿಫೋನ್‍ಗಳು ಕೈಕೊಡುವಂತಾಯಿತು. ಗ್ರಾಮೀಣ ಕೆಲವೆಡೆ ಮೋಡ ಕಾಣಿಸಿಕೊಂಡು ಮಳೆಯ ಲಕ್ಷಣ ಗೋಚರಿಸಿದರೂ, ವರುಣ ಕೃಪೆ ತೋರಿಲ್ಲವೆಂದು ಅನೇಕರು ‘ಶಕ್ತಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ.