ಸಿದ್ದಾಪುರ, ಮಾ. 11: ನೆಲ್ಯಹುದಿಕೇರಿಯ ಎಸ್ಕೆಎಸ್ಎಸ್ಎಫ್ ಸಂಘಟನೆಯ 20ನೇ ವಾರ್ಷಿಕ ಮಹಾಸಮ್ಮೇಳನ ಅಂಗವಾಗಿ ನಿರ್ಗತಿಕ 4 ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯ ನೆಲ್ಯಹುದಿಕೇರಿಯ ಸಂಶುಲ್ ಉಲಾಮ ನಗರದಲ್ಲಿ ನಡೆಯಿತು. ಪಾಣಕಾಡ್ ಸಯ್ಯದ್ ಝೈನುಲ್ ಅಬೀದಿನ್ ಶಿಹಾಬ್ ತಂಘಳ್ ಸಾಮೂಹಿಕ ವಿವಾಹ ಕಾರ್ಯ ನೇತೃತ್ವವಹಿಸಿ ಮಾತನಾಡಿ ಎಸ್ಕೆಎಸ್ಎಸ್ಎಫ್ ಸಂಘಟನೆಯು ಕಳೆದ 20 ವರ್ಷಗಳಿಂದ 50ಕ್ಕೂ ಹೆಚ್ಚು ನಿರ್ಗತಿಕ ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಿರುವದು ಶ್ಲಾಘನೀಯ. ಇಂತಹ ಸಂಘಟನೆಗಳಿಗೆ ದಾನಿಗಳು ಸಹಕಾರ ನೀಡಬೇಕು, ಸಮಾಜ ಸೇವೆಯ ಮೂಲಕ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಯುವಕರ ಕಾರ್ಯವೈಖರಿಯನ್ನು ಅಭಿನಂದಿಸಿದರು. ಈ ಸಂದರ್ಭ ಜಿಲ್ಲಾ ಸಮಸ್ತ ಉಪಖಾಝಿ ಎಂ.ಎಂ ಅಬ್ದುಲ್ಲಾ ಫೈಝಿ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಯಾಕುಬ್, ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಸಯ್ಯಿದ್ ವಿ.ಪಿ.ಎಸ್. ಮುತ್ತುಕ್ಕೋಯ ತಂಙಳ್, ಮುಸ್ಲಿಂ ಜಮಾಅತ್ ಅಧ್ಯಕ್ಷ ಒ.ಎಂ. ಅಬ್ದುಲ್ಲಾ ಹಾಜಿ ಪ್ರಮುಖರಾದ ವೈ.ಎಂ. ಉಮ್ಮರ್ ಫೈಝಿ ಅಬ್ದುಲ್ ರೆಹಮಾನ್ ಮುಸ್ಲಿಯಾರ್, ಎನ್.ಎನ್ ಇಖ್ಬಾಲ್ ಮೌಲವಿ, ಪಿ.ಬಿ ಇಸ್ಮಾಯಿಲ್ ಮುಸ್ಲಿಯಾರ್, ಅಶ್ರಫ್ ಹಾಜಿ, ಸಿ.ಪಿ.ಎಂ ಬಶೀರ್ ಹಾಜಿ, ತಮ್ಲೀಖ್ ದಾರಿಮಿ, ಎ.ಕೆ ಅಬ್ದುಲ್ ಹಕೀಂ, ಬಶೀರ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.