ಮಡಿಕೇರಿ, ಮಾ. 11: ನೆಹರು ಯುವ ಕೇಂದ್ರದ ರಾಷ್ಟ್ರೀಯ ಸೇವಾ ಕಾರ್ಯಕರ್ತರ ಆಯ್ಕೆ ಪ್ರಕ್ರೀಯೆ ಸಮಿತಿಯ ಸದಸ್ಯರಾಗಿ ಕೊಡಗಿ ನಿಂದ ಶಿವರಾಜ್ ಹಾಕತ್ತೂರು, (ಎಂ.ಎ.ಬಿ.ಎಡ್.) ಮತ್ತು ನವನೀತ್ ಕುಶಾಲನಗರ ಇವರುಗಳನ್ನು ಆಯ್ಕೆ ಮಾಡಿ ಭಾರತ ಸರಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ಆದೇಶ ಹೊರಡಿಸಿದೆ. ಈ ಸಮಿತಿಯಲ್ಲಿ ಚೇರ್‍ಮನ್ ಆಗಿ ಜಿಲ್ಲಾಧಿಕಾರಿಗಳು, ಕಾರ್ಯದರ್ಶಿಯಾಗಿ ಜಿಲ್ಲಾ ಯುವ ಜನ ಸಮನ್ವಯಾಧಿಕಾರಿಗಳು ಹಾಗೂ ಈ ಇಬ್ಬರು ನಾಮನಿರ್ದೇಶಕರು ರಾಷ್ಟ್ರೀಯ ಸ್ವಯಂ ಸೇವಕರ ಆಯ್ಕೆ ಪ್ರಕ್ರೀಯೆಯಲ್ಲಿ ಇರುತ್ತಾರೆ.