ವೀರಾಜಪೇಟೆ, ಮಾ. 11: ಗರ್ಭಿಣಿ ಮಹಿಳೆಯರಿಗೆ ಅಂಗನವಾಡಿ ಮೂಲಕ 5 ಸಾವಿರ ರೂ ನೀಡುವ ಯೋಜನೆ. ಬಿಪಿಎಲ್ ಹೊಂದಿದವರಿಗೆ ಮಾತೃಶ್ರೀ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಇದನ್ನು ಎಲ್ಲ ವರ್ಗದ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳು ವಂತಾಗಬೇಕು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಕೆದಮುಳ್ಳೂರು ಗ್ರಾಮದ ಕ್ರಿಶ್ಚಿಯನ್ ಕಾಲೋನಿಯಲ್ಲಿನ ಅಂಗನವಾಡಿ ಸಭಾಂಗಣದಲ್ಲಿ 24 ಮಂದಿ ಉಜ್ಜಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲ ಕಿಟ್ ವಿತರಣೆ ಮಾಡಿ ಮಾತನಾಡಿದ ಬೋಪಯ್ಯ ಅವರು ಸ್ತ್ರೀ ಶಕ್ತಿ ಗುಂಪುಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ , ವಸತಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಈಗ ಜಾರಿಯಲ್ಲಿವೆ. ಮಹಿಳೆಯೇ ಕುಟುಂಬದ ಆಧಾರ ಸ್ಥಂಭವಾಗಲಿ ಎಂಬ ಸದುದ್ದೇಶದಿಂದ ವಿವಿಧ ಯೋಜನೆಗಳು ರೂಪಿತವಾಗಿವೆ ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್, ಗ್ರಾ.ಪಂ. ಸದಸ್ಯರಾದ ಮೆಬಿಲ್ ಡಿಸೋಜ , ಪರಮೇಶ್ವರ, ಕಿರಣ್, ಪ್ರಮೋದ್ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘುನಾಣಯ್ಯ. ಮೂರ್ನಾಡು ಭಾರತ್ ಗ್ಯಾಸ್ ವಿತರಕ ಪ್ರವೀಣ್ ಮಾದಪ್ಪ, ಅಂಗನವಾಡಿ ಶಿಕ್ಷಕಿ ಉಷಾ ಮತ್ತೀತರ ಪ್ರಮುಖರು ಉಪಸ್ಥಿತರಿದ್ದರು.