ಮಡಿಕೇರಿ, ಮಾ. 11: ಮಹದೇವಪೇಟೆ ಮಹಿಳಾ ಸಹಕಾರ ಸಂಘದ ವತಿಯಿಂದ ನಡೆಸುತ್ತಿರುವ ಬಸಪ್ಪ ಶಿಶು ವಿಹಾರದ ಮಕ್ಕಳ ವಾರ್ಷಿಕೋತ್ಸವ ಸಂಘದ ಕಟ್ಟಡದಲ್ಲಿ ನಡೆಯಿತು. ಶಿಶು ವಿಹಾರದ ಮಕ್ಕಳಿಗೆ ಛದ್ಮವೇಷ ಸ್ವರ್ಧೆ, ಇತರ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಮಕ್ಕಳ ಪೋಷಕರಿಗೂ ಸ್ಪರ್ಧೆಗಳನ್ನು ನಡೆಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ ಭಟ್ ಸ್ವಾಗತಿಸಿದರು. ಶಿಶುವಿಹಾರದ ಶಿಕ್ಷಕಿ ಪೊನ್ನಮ್ಮ ಕಾರ್ಯಕ್ರಮ ನಿರೂಪಿಸಿದರು.