ಕೂಡಿಗೆ, ಮಾ. 10: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರು ಘಟಕದಿಂದ ಈ ವ್ಯಾಪ್ತಿಯ ಅನೇಕರು ರೂ. 2 ಕ್ಕೆ 20 ಲೀಟರ್ ನೀರನ್ನು ಪಡೆಯುತ್ತಿದ್ದಾರೆ. ಈ ಘಟಕವು ಆರಂಭವಾದ ಸಂದರ್ಭ ಆಯಾ ಪಂಚಾಯಿತಿ ವ್ಯಾಪ್ತಿಗಳಲ್ಲಿ ಗ್ರಾಹಕರಿಂದ ಒಂದು ತಿಂಗಳಿಗೆ ಹಣ ಪಡೆದು ಕಾರ್ಡ್‍ಗಳನ್ನು ವಿತರಿಸಲಾಗಿ, ಕಾರ್ಡ್ ಉಪಯೋಗಿಸಿ ಗ್ರಾಹಕರು ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು. ತಾಲೂಕು ಪಂಚಾಯಿತಿಯ ನೀರು ಸರಬರಾಜು ಯೋಜನೆಯಡಿಯಲ್ಲಿ ಈ ಘಟಕಗಳು ಇದ್ದು, ಈ ಘಟಕಗಳ ನಿರ್ವಹಣೆಗೆ ಒಬ್ಬೊಬ್ಬರನ್ನು ನೇಮಿಸಿದೆ. ಇದೀಗ ಗ್ರಾಹಕರ ಕಾರ್ಡ್‍ಗಳನ್ನು ನವೀಕರಣ ಮಾಡಬೇಕಿದ್ದು, ಘಟಕಕ್ಕೆ ನೇಮಿಸಿರುವ ವ್ಯಕ್ತಿಯು ಗ್ರಾಹಕರ ಮನವಿಗೆ ಸ್ಪಂದಿಸುತ್ತಿಲ್ಲ ಎಂಬ ಆಕ್ಷೇಪ ಕೇಳಿ ಬಂದಿದೆ. ಈ ಹಿನ್ನೆಲೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡಲಾಗುವದು ಎಂದು ಕಾರ್ಡ್‍ಗಳನ್ನು ಪಡೆದಿರುವ ಗ್ರಾಹಕರು ಎಚ್ಚರಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.