ಮಡಿಕೇರಿ, ಮಾ. 10: ಗರ್ವಾಲೆ ಗ್ರಾಮದ ಶ್ರೀ ಈಶ್ವರ (ಬೊಟ್ಲಪ್ಪ) ದೇವರ ಹಬ್ಬವು ತಾ. 12 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ದೇವÀ ತಕ್ಕರಾದ ಐ.ಜೆ. ಭೀಮಯ್ಯ ಮತ್ತು ಮುಕ್ಕಾಟಿಯವರಾದ ಓ.ಪಿ. ಉತ್ತಪ್ಪ ಅವರು ತಿಳಿಸಿದ್ದಾರೆ.
* ಗರ್ವಾಲೆ ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವರ ಹಬ್ಬವು ತಾ. 13 ರಂದು ಮಧ್ಯರಾತ್ರಿ 12 ಗಂಟೆಗೆ ನಡೆಯಲಿದೆ ಎಂದು ದೇವ ತಕ್ಕರಾದ ಬಿ.ಎಂ. ಸೋಮಯ್ಯ ಮತ್ತು ಮುಕ್ಕಾಟಿಯವರಾದ ಪಿ.ಕೆ. ಪ್ರಕಾಶ್ ಅವರು ಮಾಹಿತಿ ನೀಡಿದ್ದಾರೆ.
ಕೆದಕಲ್: ಕೆದಕಲ್‍ನ ಶ್ರೀ ಭದ್ರಕಾಳೇಶ್ವರಿ ದೇವಸ್ಥಾನದಲ್ಲಿ 19ನೇ ವರ್ಷದ ಪ್ರತಿಷ್ಠಾಪನಾ ಹಾಗೂ ವಾರ್ಷಿಕ ಉತ್ಸವದ ಪ್ರಯುಕ್ತ ತಾ. 12 ರಂದು ಬೆಳಿಗ್ಗೆ 10 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.