ವಿಶೇಷ ಶಿಬಿರ
ಕುಶಾಲನಗರ: ಕುಶಾಲನಗರ ಸಮೀಪದ ಕೊಪ್ಪ ಭಾರತ ಮಾತ ಪ್ರಥಮ ದರ್ಜೆ ಕಾಲೇಜಿನ 2018-19ರ ವಾರ್ಷಿಕ ವಿಶೇಷ ಶಿಬಿರ ರಾಣಿಗೇಟ್ ಸರಕಾರಿ ಗಿರಿಜನ ವಸತಿ ಶಾಲಾ ಆವರಣದಲ್ಲಿ ನಡೆಯಿತು. 7 ದಿನಗಳ ಕಾಲ ನಡೆದ ಶಿಬಿರದಲ್ಲಿ ಶ್ರಮದಾನ, ಗ್ರಾಮದ ಸ್ವಚ್ಛತೆ, ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವದು ಸೇರಿದಂತೆ ಸಾಂಸ್ಕøತಿಕ ಸ್ಪರ್ಧೆಗಳು, ಕ್ರೀಡಾ ಚಟುವಟಿಕೆಗಳು, ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭಾರತ ಮಾತ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಕೆ. ಜಾಯ್, ಉಪ ಪ್ರಾಂಶುಪಾಲ ಟಿ.ಜೆ. ಜೋಸ್, ಆಡಳಿತಾಧಿಕಾರಿ ಥಾಮಸ್ ಅವರುಗಳು ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಶಾಲಾ ಆವರಣ ಶುಚಿತ್ವ, ಸಾರ್ವಜನಿಕರಿಗೆ ಕಾನೂನು ಪರಿಕಲ್ಪನೆ ಬಗ್ಗೆ ಅರಿವು, ಗ್ರಾಮೀಣ ಮಹಿಳೆಯರಿಗೆ ಮತ್ತು ಯುವಕರಿಗೆ ನಾಯಕತ್ವ ತರಬೇತಿ, ಶಿಬಿರಾರ್ಥಿಗಳಿಗೆ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮಗಳು ಜರುಗಿದವು.
ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಗ್ರಾಮದ ಜನರಿಗೆ ಸಾಮಾಜಿಕ ಅರಿವು ಮೂಡಿಸುವ ನಾಟಕ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಮೀಣ ಜನತೆ ಮತ್ತು ಮೌಢ್ಯತೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇತಿಹಾಸ, ಸಾಮಾಜಿಕ ಪರಿವರ್ತನೆಯಲ್ಲಿ ವಿದ್ಯಾರ್ಥಿಗಳ ಪಾತ್ರ, ಮಹಿಳಾ ಸಬಲೀಕರಣದಲ್ಲಿ ಸ್ತ್ರೀಶಕ್ತಿ ಸಂಘಗಳ ಪಾತ್ರ ಮತ್ತಿತರ ವಿಶೇಷ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಶಿಬಿರದ ನಿರ್ದೇಶಕರು ಹಾಗೂ ಭಾರತ ಮಾತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜೋಸೆಫ್ ಮಾರ್ಗದರ್ಶನದಲ್ಲಿ ಶಿಬಿರಾಧಿಕಾರಿ ಹೆಚ್.ಆರ್. ದಿನೇಶ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 40 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಆಶ್ರಮ ವಸತಿ ಶಾಲಾ ಮುಖ್ಯ ಶಿಕ್ಷಕ ಕೀರ್ತಿಕುಮಾರ್, ಸಹ ಶಿಬಿರಾಧಿಕಾರಿಗಳಾದ ಸಿಬಿ ಫ್ರಾನ್ಸಿಸ್, ರೋಶ್ನಿ ಇದ್ದರು.
ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ
ವೀರಾಜಪೇಟೆ: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಕವನ ಮಡಿಕೇರಿಯ ಎಫ್‍ಎಂ ಕೆಸಿ ಕಾಲೇಜಿನಲ್ಲಿ ಸ್ಥಳೀಯ ವಾಹಿನಿ ಚಾನಲ್ 24 ವತಿ ಯಿಂದ ಆಯೋಜಿಸ ಲಾಗಿದ್ದ ಜಿಲ್ಲಾಮಟ್ಟದ ಅಂತರ ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಮೊದಲ ಹಂತದಲ್ಲಿ ಪಾಲ್ಗೊಂಡ 95 ವಿದ್ಯಾರ್ಥಿಗಳಲ್ಲಿ 10 ಸ್ಪರ್ಧಿಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ‘ಉನ್ನತ ಶಿಕ್ಷಣದಲ್ಲಿ ಪಠ್ಯ ಪುಸ್ತಕಗಳ ಅವಶ್ಯಕತೆ’ ವಿಷಯದ ಕುರಿತು ನಡೆದ ಚರ್ಚಾ ಸ್ಪರ್ಧೆಯಲ್ಲಿ ಕವನ ಪಾರಿತೋಷಕ ಹಾಗೂ ನಗದು ಬಹುಮಾನ ಪಡೆದಿದ್ದಾರೆ.