ವೀರಾಜಪೇಟೆ, ಮಾ. 9: ವೀರಾಜಪೇಟೆ-ಕರಡ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಕೆದಮಳ್ಳೂರು ಗ್ರಾಮ ಕ್ರಿಶ್ಚನ್ ಕಾಲೋನಿಯಲ್ಲಿ ಅರ್ಹ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಣೆ ಕಾರ್ಯಕ್ರಮದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತರ್ಮೆಮೊಟ್ಟೆಯಲ್ಲಿ ಚಾಲನೆ ನೀಡಿದರು.
ತರ್ಮೆಮೊಟ್ಟೆ ಪುತ್ತಂಮಕ್ಕಿಯಲ್ಲಿ ಮಳೆ ಮತ್ತು ಪ್ರಕೃತಿ ವಿಕೋಪದ ವಿಶೇಷ ಅನುದಾನ ನಿಧಿಯ ಕಾಮಗಾರಿಯಲ್ಲಿ ಬಿಡುಗಡೆಯಾದ ರೂ. 75 ಲಕ್ಷದ ವೆಚ್ಚದಲ್ಲಿ ದ್ವಿಮುಖ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಕೆ.ಜಿ. ಬೋಪಯ್ಯ ಮಾದ್ಯಮದೊಂದಿಗೆ ಮಾತನಾಡಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ರಸ್ತೆಯು ಸಂಚಾರಕ್ಕೆ ಯೋಗ್ಯವಲ್ಲದೇ ಸಾರ್ವಜನಿಕರಿಗೆ ಕಷ್ಟಸಾಧ್ಯವಾಗಿ ಪರಿಣಮಿಸಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಮೂರು ಬಾರಿ ತಿರಸ್ಕøತಗೊಂಡು ಕಾಮಗಾರಿಗಳಿಗೆ ಮರು ಜೀವ ದೊರಕಿದೆ. ಗ್ರಾಮಸ್ಥರ ಕನಸು ನನಸಾಗಿದೆ ಎಂದರು.
ಜಿಲ್ಲಾ ಪಂಚಾಯಿತಿಯ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಗ್ರಾಮ ಪಂಚಾಯಿತಿಯ ಸದಸ್ಯ ಪರಮೇಶ್ವರ ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಕಿರಣ್ ಕುಮಾರ್, ಮಾಳೇಟಿರ ಚುಕ್ಕು ದೇವಯ್ಯ, ಪಟ್ರಪಂಡ ರಘು ನಾಣಯ್ಯ ಮತ್ತು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
ಬಳಿಕ ಕೆದಮುಳ್ಳೂರು ಗ್ರಾಮ ಕ್ರಿಶ್ಚನ್ ಕಾಲೋನಿಯ ಅಂಗನವಾಡಿಯ ಮುಂಭಾಗದಲ್ಲಿ ನಡೆದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನಾಲ್ಕನೇ ಹಂತದ ಅರ್ಹ 24 ಫಲಾನುಭವಿಗಳಿಗೆ ಉಚಿತ ಅನಿಲ ವಿತರಣೆಯನ್ನು ಕೆ.ಜಿ. ಬೋಪಯ್ಯ ನೆರವೇರಿಸಿದರು. ಗ್ಯಾಸ್ ವಿತರಣಾ ಸಮಾರಂಭದಲ್ಲಿ ಭಾ.ಜ.ಪ. ಮುಖಂಡ ಪಟ್ರಪಂಡ ರಘು ನಾಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್ವರ್, ಕಿರಣ್ ಕುಮಾರ್ ಮತ್ತು ಮೇಬಲ್ ಡಿ.ಸೋಜ ಮತ್ತು ಸುಬ್ರಮಣ್ಯ ಗ್ಯಾಸ್ ವಿತರಕ ಸಂಸ್ಥೆಯ ಮುದ್ದಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಕಾಂಗ್ರೆಸ್ ವಿರೋಧ : ಈ ನಡುವೆ ಕಾಂಗ್ರೆಸ್ ಸದಸ್ಯರು ಒಂದೆಡೆ ಸೇರಿ ಕಾರ್ಯಕ್ರಮಕ್ಕೆ ವಿರೋಧವು ವ್ಯಕ್ತಪಡಿಸಿದರು. ವೀರಾಜಪೇಟೆ-ಕರಡ ಮುಖ್ಯ ರಸ್ತೆ ಕಾಮಗಾರಿಗೆ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೊಡಗು ಉಸ್ತುವಾರಿ ಸಚಿವರ ವಿಶೇಷ ಅನುಧಾನದಲ್ಲಿ ರೂ. 75 ಲಕ್ಷ ಬಿಡುಗಡೆಯಾಗಿದೆ. ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವದೇ ಕಚ್ಚಾವಸ್ತ್ತುಗಳು ಬಾರದೇ ಭೂಮಿ ಪೂಜೆ ನೆರವೇರಿಸಿರುವದು ರಾಜಕೀಯ ಪ್ರೇರಿತವಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಆರೋಪಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಸ್ಥಳೀಯ ಪಂಚಾಯಿತಿಗೆ ಮಾಹಿತಿ ನೀಡದೇ ಅಧ್ಯಕ್ಷರ ಗಮನಕ್ಕೆ ಬಾರದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ದುಃಖದ ಸಂಗತಿಯಾಗಿದೆ. ಭಾ.ಜ.ಪ. ಪಕ್ಷದ ಕೆಲವು ಗ್ರಾಮ ಪಂಚಾಯಿತಿಯ ಸದಸ್ಯರು ಜನರಿಗೆ ತಪ್ಪಾದ ಸಂದೇಶ ನೀಡುತ್ತಿರುವದರಿಂದ ಈ ರೀತಿ ವಿಪರ್ಯಾಸವಾಗಿದೆ ಎಂದರು.
ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಮಾಳೇಟಿರ ಗಣಪತಿ, ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ, ಮೆಬಲ್ ಡಿ.ಸೋಜಾ, ಬೆಲ್ಲು ಬೋಪಯ್ಯ, ಜೋನಲ್ ಅಧ್ಯಕ್ಷ ಎನ್. ಮಹೇಶ್, ಆರ್.ಎಂ.ಸಿ. ನಾಮನಿದೆರ್Éೀಶಿತ ಸದಸ್ಯ ಮಾಳೇಟಿರ ಬೋಪಣ್ಣ, ಮಾಜಿ ಅಧ್ಯಕ್ಷ ಎಮ್ಮಿ ಪೊನ್ನಪ್ಪ ಹಾಜರಿದ್ದರು.
- ಕೆ.ಕೆ.ಎಸ್.