ಮಡಿಕೇರಿ, ಮಾ. 9: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಒಟ್ಟು ರೂ. 7.50 ಲಕ್ಷ ಮೊತ್ತದ ಪರಿಹಾರ ವಿತರಣೆ ಮಾಡಲಾಯಿತು.
ಇಲ್ಲಿನ ಕೂರ್ಗ್ ಕಮ್ಯುನಿಟಿ ಹಾಲ್ನಲ್ಲಿ ನಡೆದ ಸಂತ್ರಸ್ತರಿಗೆ ಪರಿಹಾರ ವಿತರಣೆ ಹಾಗೂ ಮನೆ ನಿರ್ಮಾಣ ನಕಾಶೆ ಬಿಡುಗಡೆ ಸಮಾರಂಭದಲ್ಲಿ ಜಾತ್ಯತೀತವಾಗಿ ಆಯ್ದ ಒಟ್ಟು 118 ಮಂದಿ ಸಂತ್ರಸ್ತರಿಗೆ ರೂ. 7.50 ಲಕ್ಷ ಮೊತ್ತದ ಚೆಕ್ ವಿತರಣೆ ಮಾಡಲಾಯಿತು. ಅಲ್ಲದೆ ಮನೆ ಕಳೆದುಕೊಂಡ ಒಂದು ಕುಟುಂಬಕ್ಕೆ ರೂ. 8 ಲಕ್ಷ ಮೊತ್ತದಲ್ಲಿ ಮನೆ ನಿರ್ಮಿಸಿಕೊಡಲು ತೀರ್ಮಾನಿ ಸಿದ್ದು, ಮನೆಯ ನಕಾಶೆ ಬಿಡುಗಡೆ ಗೊಳಿಸಲಾಯಿತು. ಮತ್ತೊಂದು ಹಾನಿಗೀಡಾಗಿರುವ ಮನೆಯನ್ನು ರೂ. 2.50 ಲಕ್ಷದಲ್ಲಿ ದುರಸ್ತಿಪಡಿಸಲು ತೀರ್ಮಾನಿಸಲಾಗಿತ್ತಾದರೂ, ಪೂರ್ಣ ಮನೆ ದುರಸ್ತಿ ಪಡಿಸಿಕೊಡಬೇಕೆಂಬ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಇನ್ನಷ್ಟು ಹಣ ಸಂಗ್ರಹಿಸಿ ದುರಸ್ತಿ ಪಡಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ಸಂಘಟಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿ.ಎಫ್.ಐ. ರಾಜ್ಯಾಧ್ಯಕ್ಷ ಮುಹಮ್ಮದ್ ಶಾಫಿಕ್, ರಾಜ್ಯ ಸಮಿತಿ ಸದಸ್ಯ ಎ.ಕೆ. ಅಶ್ರಫ್, ಎಸ್ಡಿಪಿಐ ಅಧ್ಯಕ್ಷ ಅಮೀನ್ ಮೊಹಿಸಿನ್, ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾರೈ, ಪ್ರೆಸ್ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ, ಜಾಮೀಯಾ ಮಸೀದಿ ಅಧ್ಯಕ್ಷ ನಜೀರ್, ಎಸ್ಡಿಪಿಐ ಕಾರ್ಯದರ್ಶಿ ಅಬ್ದುಲ್ಲ ಅಡ್ಕಾರ್, ನಗರಸಭಾ ಸದಸ್ಯರುಗಳಾದ ಮನ್ಸೂರ್, ಪೀಟರ್, ಮಾಜಿ ಸದಸ್ಯೆ ಜುಲೆಕಾಬಿ, ಪಿಎಫ್ಐ ಕೋಸ್ಟಲ್ ಕಾರ್ಯದರ್ಶಿ ಮಶೂದ್ ಇನ್ನಿತರರು ಹಾಜರಿದ್ದರು.