ಸೋಮವಾರಪೇಟೆ,ಮಾ.8: ತೋಟ ಮಾಲೀಕರು ಮನೆಯಲ್ಲಿ ಇಲ್ಲದ ಸಂದರ್ಭ, ಮನೆಯೊಳಗೆ ಶೇಖರಿಸಿಟ್ಟಿದ್ದ ಕರಿಮೆಣಸು ಮತ್ತು ನಗದು ಹಣ ಕಳುವಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಕೂತಿ ಗ್ರಾಮದ ನವೀನ್ ಎಂಬವರ ಮನೆಯಲ್ಲಿ ಶೇಖರಿಸಿಟ್ಟಿದ್ದ ಸುಮಾರು 40 ಕೆ.ಜಿ. ಕರಿಮೆಣಸು ಮತ್ತು 3 ಸಾವಿರ ನಗದು ಕಳುವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ದೂರು ದಾಖಲಿಸಿಕೊಂಡ ಠಾಣಾಧಿಕಾರಿ ಶಿವಶಂಕರ್ ಅವರು ತನಿಖೆ ಕೈಗೊಂಡಿದ್ದು, ಕಾರ್ಮಿಕ ಯುವಕನೋರ್ವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.