ಮಡಿಕೇರಿ, ಮಾ. 7: ಮಡಿಕೇರಿ ತಾಲೂಕಿನ 11 ಅಂಗನವಾಡಿ ಕಾರ್ಯಕರ್ತೆ ಹಾಗೂ 14 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಆನ್‍ಲೈನ್ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾಹಿತಿಯನ್ನು ಆನ್‍ಲೈನ್‍ನಲ್ಲಿ ತಾ. 22 ರಂದು ಪ್ರಾರಂಭಿಸಿ ತಾ. 23.3.2019 ರಂದು ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ 4 ರಿಂದ 9ನೇ ತರಗತಿಯೊಳಗೆ ವ್ಯಾಸಂಗ ಮಾಡಿರಬೇಕು. 18 ರಿಂದ 35ವರ್ಷ ವಯೋಮಿತಿಯೊಳಗಿರುವ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ. ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೆಬ್‍ಸೈಟ್ ತಿತಿತಿ.ಚಿಟಿgಚಿಟಿತಿಚಿಜiಡಿeಛಿಡಿuiಣ. ಞಚಿಡಿ.ಟಿiಛಿ.iಟಿ ನಲ್ಲಿ ಅರ್ಜಿಯನ್ನು ಭರ್ತಿ ಮಾಡ ಬಹುದಾಗಿರುತ್ತದೆ. ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ.
ಕಾರ್ಯಕರ್ತೆಯರ ಹುದ್ದೆ: ತಲಕಾವೇರಿ, ಉಡೋತ್ ಮೊಟ್ಟೆ, ಕೋಟೇರಿ, ಹೊದವಾಡ ಅಂಬಲ, ಬಲಮುರಿ-3, ಪೇರೂರು, ಇಂದಿರಾನಗರ, ಕಬಡಗೇರಿ, ಮಹದೇವಪೇಟೆ, ಮುಟ್ಲು, ವಣಚಲು.
ಸಹಾಯಕಿಯರ ಹುದ್ದೆ: ಅಜ್ಜಿಮುಟ್ಟ, ಬಾಣೆಮೊಟ್ಟೆ, ಮಂಗಳಾದೇವಿ ನಗರ, ಎಂ. ಬಾಡಗ-2, ಮರಗೋಡು ಬಕ್ಕ, ಪರಂಬು ಪೈಸಾರಿ, ಗಾಳಿಬೀಡು-2, ಕೊಟ್ಟಮುಡಿ-2, ಕಾರುಗುಂದ ಕಾಲೋನಿ, ಕಿಕ್ಕರೆ, ಕಬ್ಬಿನಕಾಡು, ಕುಂದ್ರುಮೊಟ್ಟೆ, ತೂತ್ತಿಯಂಡ ಬಾರಿಕೆ, ಜನತಾ ಕಾಲೋನಿ. ಮಾಹಿತಿಗೆ ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ-08272-228197 ಯನ್ನು ಸಂಪರ್ಕಿಸಬಹುದು.