ಸೋಮವಾರಪೇಟೆ, ಮಾ. 7: ಬಾಗಲಕೋಟೆಯ ತೋಟಗಾರಿಕಾ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಿ.ಜಿ. ಜಸ್ಮಿತಾಗೆ 4 ಚಿನ್ನದ ಪದಕ ಲಭಿಸಿದೆ.

ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ಪಿಹೆಚ್‍ಡಿ ಮಾಡುತ್ತಿರುವ ಜಸ್ಮಿತಾ, ಹಣ್ಣು-ಹಂಪಲು ವಿಭಾಗದ ಎಂ.ಎಸ್.ಸಿ.ಯಲ್ಲಿ ಒಟ್ಟು 4 ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ತೋರಿದ್ದಾರೆ. ಘಟಿಕೋತ್ಸವದಲ್ಲಿ ಕುಲಪತಿ ಡಾ. ಎಂ.ಕೆ. ಇಂದ್ರೇಶ್, ತೋಟಗಾರಿಕಾ ಇಲಾಖಾ ಸಚಿವ ಎಂ.ಸಿ. ಮನಗೊಳಿ, ಭಾರತೀಯ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಧ್ಯಕ್ಷ ಡಾ. ಕೆ.ವಿ. ಪ್ರಭು ಅವರುಗಳು ಚಿನ್ನದ ಪದಕ ವಿತರಿಸಿದರು. ಈಕೆ ಸೋಮವಾರಪೇಟೆ ತಲ್ತರೆಶೆಟ್ಟಳ್ಳಿಯ ಬಗ್ಗನ ಕಾಂತಿ ಗಿರೀಶ್ ಅವರ ಪುತ್ರಿ.