ಶ್ರೀಮಂಗಲ, ಮಾ. 5: ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ವಾರ್ಷಿಕ ಸಭೆ ತಾ. 9 ರಂದು ಪೂರ್ವಾಹ್ನ 10.30ಕ್ಕೆ ಮಡಿಕೇರಿಯ ಹೊಟೇಲ್ ಮಯೂರ ವ್ಯಾಲಿ ವ್ಯೂನಲ್ಲಿ ನಡೆಯಲಿದೆ.

ಮುಖ್ಯ ಅತಿಥಿಯಾಗಿ ರಾಜ್ಯ ಕೆ.ಎ.ಯಂ.ಎಸ್. ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಡಿ.ಡಿ.ಪಿ.ಐ. ಮಚ್ಚಾಡೋ, ಸಂಘದ ಅಧ್ಯಕ್ಷ ಝರು ಗಣಪತಿ, ಉಪಾಧ್ಯಕ್ಷ ಎಂ.ಟಿ. ದಾಮೋದರ್, ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ಭಾಗವಹಿಸಲಿದ್ದಾರೆ.