ಈ ನಡುವೆ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡ ಅವರು ಸ್ಪರ್ಧಿಸಲಿರುವ ಕುರಿತು ಭಾರೀ ಪ್ರಚಾರ ಕೇಳಿಬರುತ್ತಿದೆ. ಲೋಕಸಭಾ ಚುನಾವಣೆ ಘೋಷಣೆಯಾಗದಿದ್ದರೂ ಸನಿಹವಾಗುತ್ತಿರುವ ಖಾತರಿ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣೆಯನ್ನು ಎದುರಿಸಲು ಈಗಿನಿಂದಲೇ ತಾಲೀಮು ಆರಂಭಿಸಿವೆ. ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತವೆ ಎಂದು ಈಗಾಗಲೇ ಉಭಯ ಪಕ್ಷಗಳ ಮುಖಂಡರು ಘೋಷಣೆ ಮಾಡಿಕೊಂಡಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕೈ-ತೆನೆ ದೋಸ್ತಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಚಾರ ಹಿನ್ನೆಲೆಯಲ್ಲಿ

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕಣಕ್ಕೆ?(ಮೊದಲ ಪುಟದಿಂದ) ಕೊಡಗು ಜಿಲ್ಲಾ ಜೆ.ಡಿ.ಎಸ್‍ನಲ್ಲೂ ಸಂಚಲನವುಂಟಾಗಿದೆ. ಇದರಿಂದಾಗಿ ಜಿಲ್ಲಾಧ್ಯಕ್ಷ ಸ್ಥಾನ ಮಹತ್ವ ಪಡೆದುಕೊಳ್ಳುತ್ತಿದೆ. ಇನ್ನು ಕೆಲವರ ಅನಿಸಿಕೆಯಂತೆ ಜಿಲ್ಲೆಯಲ್ಲಿ ಈಗಿನಂತೆಯೇ ಯಥಾವತ್ತಾಗಿ ಮುಂದುವರಿದರೂ ದೇವೇಗೌಡರ ಸ್ಪರ್ಧೆಯಿಂದ ಪಕ್ಷದ ಮೆರುಗು ಹೆಚ್ಚಲಿದ್ದು ಜೆಡಿಎಸ್ ಅಧ್ಯಕ್ಷ ಸ್ಥಾನ ತತ್ಕಾಲಕ್ಕೆ ಗೌಣವೆÀನಿಸುತ್ತದೆ ಎಂದು ಈ ಮಂದಿ ತಮ್ಮ ನಿಲುವು ವ್ಯಕ್ತಪಡಿಸಿದರು.

ಮೈಸೂರು -ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್- ಜೆಡಿಎಸ್ ಒಗ್ಗೂಡಿದರೆ ದೋಸ್ತಿಗಳ ವಿರುಧ್ದ ಬಿಜೆಪಿ ನೇರ ಹೋರಾಟ ನಡೆಸಬೇಕಾಗುತ್ತದೆ.

2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಹೆಚ್.ವಿಶ್ವನಾಥ್ 4,72,300 ಜೆಡಿಎಸ್ ನ ಚಂದ್ರಶೇಖರಯ್ಯ 1,38,587, ಬಿಎಸ್.ಪಿಯ ಸಿ. ಮೋಹನ್ ಕುಮಾರ್ 13,637 ಹಾಗೂ ಕ್ಷೇತ್ರದ ಹಾಲಿ ಸಂಸದರಾದ ಬಿ.ಜೆ.ಪಿ ಯ ಪ್ರತಾಪ್ ಸಿಂಹ 5,03,908 ಮತಗಳನ್ನು ಗಳಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು.