ಮಡಿಕೆÉೀರಿ, ಮಾ.5 : ಪಕ್ಷ ದೊಳಗಿದ್ದೇ ಪಕ್ಷವನ್ನು ದುರ್ಬಲ ಗೊಳಿಸುವ ಮನೋಭಾವನೆ ತೋರುವ ಕಮಲ ಕಾಂಗ್ರೆಸ್ಸಿಗರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್‍ನಲ್ಲಿ ಇನ್ನು ಮುಂದೆ ಅವಕಾಶಗಳಿರುವುದಿಲ್ಲವೆಂದು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದೊಳಗಿದ್ದೆ ಪಕ್ಷ ಸಂಘಟನೆಗೆ ಅಸಹಕಾರ ತೋರುವವರು, ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುವವರು ಹಾಗೂ ಅಶಿಸ್ತಿನಿಂದ ನಡೆದು ಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿರುವವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ನಡೆದುಕೊಳ್ಳುವವರಾಗಿರಬೇಕು ಪಕ್ಷಕ್ಕೆ ನಿಷ್ಟರಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿಗೆ, ಹೊಸ ಮುಖಗಳಿಗೆ ಮುಂಬರುವ ದಿನಗಳಲ್ಲಿ ಅಗತ್ಯ ಹುದ್ದೆಗಳನ್ನು ನೀಡಲು ವರಿಷ್ಠರಿಗೆ ಶಿಫಾರಸು ಮಾಡಲಾಗುತ್ತದೆ ಎಂದು ಹೇಳಿದರು. ಬಿಜೆಪಿ ಅಧಿಕಾರದ ದಾಹಕ್ಕಾಗಿ ಮತಪಟ್ಟಿಯಿಂದ ಕಾಂಗ್ರೆಸ್ ಮತದಾರರನ್ನು ಕೈಬಿಡುವ ಕಾರ್ಯಕ್ಕೆ ಕೈ ಹಾಕಿದೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿದರು.

ಕಾಂಗ್ರೆಸ್‍ನತ್ತ ಒಲವು ಹೊಂದಿರುವ ದಲಿತ, ಹಿಂದುಳಿದ ಮತ್ತು ಜಾತ್ಯತೀತ ಚಿಂತನೆ ಹೊಂದಿರುವವರನ್ನು ಮತಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕೆಪಿಸಿಸಿ ‘ಒಂದು ಮನೆ ಒಂದು ಮತ’ ಎನ್ನುವ ಕಾರ್ಯಕ್ರಮದಡಿ ಆ್ಯಪ್ ಒಂದನ್ನು ಹೊರ ತಂದಿದೆ. ಅದರ ಮೂಲಕ ಪ್ರತಿ ಬೂತ್ ಮಟ್ಟದಲ್ಲಿ ಒಂದು ಮತ ಇರುವ ಮನೆಗಳನ್ನು ಗುರುತಿಸಿ ಆ ಮನೆಯ ಎಲ್ಲ ಸದಸ್ಯರನ್ನು ಮತಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವದಾಗಿ ಮಂಜುನಾಥ್ ಕುಮಾರ್ ಮಾಹಿತಿ ನೀಡಿದರು.

ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ಲೋಕಸಭಾ ಚುನಾವಣೆ ಎದುರಾಗಲಿರುವದರಿಂದ ಕಾಂಗ್ರೆಸ್ ಮತದಾರರನ್ನು ತಲಪುವ ಜನ ಸಂಪರ್ಕ ಅಭಿಯಾನ, ಶಕ್ತಿ ಪ್ರಾಜೆಕ್ಟ್ ಮತ್ತು ಒಂದು ಮನೆ ಒಂದು ಮತ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಕೆಪಿಸಿಸಿ ಸದಸ್ಯ ಜೋಸೆಫ್ ಶ್ಯಾಂ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಘÀಟಕದ ಸಂಚಾಲಕ ಎಂ.ಎ. ಉಸ್ಮಾನ್ ಹಾಗೂ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಟಿ.ಸುರೇಶ್ ಉಪಸ್ಥಿತರಿದ್ದರು.