ವೀರಾಜಪೇಟೆ, ಮಾ. 6: ನಗರದ ಹಿಂದೂ ರುದ್ರ ಭೂಮಿಯಲ್ಲಿ ಸಂಜೆ ವೇಳೆಯಲ್ಲಿ ಅಕ್ರಮವಾಗಿ ಜೂಜುನಲ್ಲಿ ತೊಡಗಿಸಿಕೊಂಡಿದ್ದ ಹತ್ತು ಮಂದಿಯನ್ನು ಬಂದಿಸಿ ನಗದು ವಶಪಡಿಸಿಕೊಂಡಿರುವ ನಡೆದಿದೆ.
ಶಿವಕೇರಿಯ ಹಿಂದೂ ರುದ್ರಭೂಮಿಯಲ್ಲಿ ಕೆಲವು ಮಂದಿ ಅಕ್ರಮ ಜೂಜು ಆಟದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಈ ಸ್ಥಳದಲ್ಲಿ ಯುವಕರ ಒಡಾಟ ಹೆಚ್ಚಾಗಿದೆ ಎಂದು ನಗರದ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶಿವರಾತ್ರಿ ದಿನದಂದು ರಾತ್ರಿಯ ವೇಳೆ ಮಾಹಿತಿಯ ಅನ್ವಯ ಪೊಲೀಸರು ಸ್ಥಳಕ್ಕೆ ಧಾಳಿ ಮಾಡಿದ ಸಂದÀರ್ಭದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದು ಕಂಡುಬಂದಿದೆ. ಸ್ಥಳದಲ್ಲಿದ್ದ ಹತ್ತು ಮಂದಿಯನ್ನು ಬಂದಿಸಿದ ಪೊಲೀಸರು ಜೂಜುಕೋರರಿಂದ 17.250 ನಗದು ವಶ ಪಡಿಸಿಕೊಂಡಿದ್ದು, ಬಂದಿತರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. - ಕೆ.ಕೆ.ಎಸ್.