ಚೆಟ್ಟಳ್ಳಿ, ಮಾ. 6: ಮಡಿಕೇರಿಯ ಗಾಂಧಿ ಮೈದಾನದಲ್ಲಿ ವಿವೇಕಾನಂದ ಯುವಕ ಸಂಘದ ವತಿಯಿಂದ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಕೊಡಗು ಎಫ್.ಸಿ. ಪಾಲಿಬೆಟ್ಟ ತಂಡವು ಜಯಗಳಿಸಿತು.
ಫೈನಲ್ ಪಂದ್ಯವು ಆತಿಥೇಯ ವಿವೇಕಾನಂದ ಎಫ್.ಸಿ. ಹಾಗೂ ಕೊಡಗು ಎಫ್.ಸಿ ಪಾಲಿಬೆಟ್ಟ ತಂಡಗಳ ನಡುವೆ ನಡೆದು ಟ್ರೈಬೇಕರ್ನಲ್ಲಿ ಪಾಲಿಬೆಟ್ಟ ತಂಡವು 5-4 ಗೋಲುಗಳ ಅಂತರದಿಂದ ಗೆಲವು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಅತ್ಯುತ್ತಮ ತಂಡವಾಗಿ ಹಾಸ್ಟೆಲ್ ಬಾಯ್ಸ್ ಮಡಿಕೇರಿ, ಟಾಪ್ ಸ್ಕೋರರ್ ಪಾಂಡ್ಯ ವಿವೇಕಾನಂದ ಎಫ್.ಸಿ., ಅತ್ಯುತ್ತಮ ಆಟಗಾರನಾಗಿ ಕೊಡಗು ಎಫ್.ಸಿ. ತಂಡದ ರಾಜು, ಬೆಸ್ಟ್ ಗೋಲ್ ಕೀಪರ್ ವಿವೇಕಾನಂದ ತಂಡದ ಮಣಿ, ಬೆಸ್ಟ್ ಡಿಫೆಂಡರ್ ಆಗಿ ವಿವೇಕಾನಂದ ತಂಡದ ಕಿರಣ್ ಪ್ರಶಸ್ತಿ ಪಡೆದರು.