ಗೋಣಿಕೊಪ್ಪಲು, ಮಾ. 6: ಹೈಸೊಡ್ಲೂರು-ಬಾಡಗರಕೇರಿ ಸಂಪರ್ಕ ರಸ್ತೆ ಕಾಮಗಾರಿ ಮುಗಿದಿರುವದರಿಂದ ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಪ್ರಧಾನ್ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರೂ 2.60 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆನೆಗುಂದಿ ಸಂಪರ್ಕ ಸೇತುವೆಯನ್ನು ಉದ್ಘಾಟಿಸಿದ ಅವರು, ರೂ. 8.61 ಕೋಟಿ ವೆಚ್ಚದಲ್ಲಿ 8.42 ಕಿ.ಮೀ. ಉದ್ದದ ಹೈಸೊಡ್ಲೂರು, ಬಾಡಗರಕೇರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಆನೆಗುಂದಿ ಸೇತುವೆ ಕಾಮಗಾರಿ ಮುಗಿಯುವದು ತಡವಾದ್ದರಿಂದ ಸಂಚಾರ ವ್ಯವಸ್ಥೆಗೂ ಅಡ್ಡಿಯಾಗಿತ್ತು. ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರಿಂದ ಈ ಭಾಗದ ಜನತೆಯ ಸಂಚಾರಕ್ಕೆ ಇದೀಗ ಅನುಕೂಲವಾದಂತಾಗಿದೆ ಎಂದು ಹೇಳಿದರು.

ಹುಣಸೂರಿನಿಂದ ಭಾಗಮಂಡಲ ದವರೆಗಿನ ರಸ್ತೆ, ಚನ್ನರಾಯ ಪಟ್ಟಣದಿಂದ ಮಡಿಕೇರಿ, ಮಾಕುಟ್ಟ ರಸ್ತೆ ಈಗಾಗಲೇ ಅಭಿವೃದ್ಧಿ ಹೊಂದಿರುವದರ ಜತೆಗೆ ಮತ್ತಷ್ಟು ಸುಧಾರಣೆ ಕಾಣಲಿವೆ. ಕಾಫಿ ಮಂಡಳಿ ಸದಸ್ಯ ಬೊಟ್ಟಂಗಡ ರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಆರ್‍ಎಂಸಿ ಸದಸ್ಯ ಗುಮ್ಮಟೀರ ಕಿಲನ್ ಗಣಪತಿ, ಬಿರುನಾಣಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಾಯ್ ಚಿಣ್ಣಪ್ಪ, ಲಾಲಾ ಭೀಮಯ್ಯ, ಯುವ ಮೋರ್ಚಾ ಅಧ್ಯಕ್ಷ ಗಪ್ಪಣ್ಣ ಹಾಜರಿದ್ದರು.